ಭೂ ಮಂಜೂರಾತಿಯಲ್ಲಿ ಭಾರಿ ಅಕ್ರಮ

ಭೂ ಮಂಜೂರಾತಿಯಲ್ಲಿ ಭಾರಿ ಅಕ್ರಮ

ಮಾಲೂರು, ಡಿ. 04: ತಾಲೂಕಿನ ಭೂರಹಿತರಿಗೆ ಭೂ ಮಂಜೂರಾತಿ ವಿಚಾರಕ್ಕೆ ಸಂಬಂಧಿಸಿದಂತೆ 6 ಪ್ರಕರಣಗಳು ಮೆಲ್ನೋಟಕ್ಕೆ ಅಕ್ರಮವಾಗಿರುವ ಬಗ್ಗೆ ಕಂಡು ಬರುತ್ತಿದ್ದು, ತಹಸೀಲ್ದಾರ್ ವಿರುದ್ದ ಭೂ ಕಾಯ್ದೆ ಆಧೀನಿಯದಡಿ ಕ್ರೀಮಿನಲ್ ಪ್ರಕರಣ ದಾಲಾಗಿಸಿ ಪೋಲಿಸ್ ತನಿಖೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಪವಿಭಾಗಾಧಿಕಾರಿ ಸೋಮಶೇಖರ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಭೂರಹಿತ ಬಡವರಿಗೆ, ಭೂಮಿ ಮಂಜೂರು ಮಾಡಲು ನಮೂನೆ 57 ಅರ್ಜಿಗಳನ್ನು ಅಹ್ವಾನಿಸಲಾಗಿದ್ದು,  ಒಟ್ಟು 5635 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 60 ಅರ್ಜಿಗಳನ್ನು ಗಣನೆಗೆ ತೆಗೆದುಕೊಂಢ್ಡಿದ್ದು, ತಾಲೂಕಿನ ರಾಂಪುರ 2, ಅನಮಿಟ್ಟಗಾನಹಳ್ಳಿ ಗ್ರಾಮದ 4 ಒಟ್ಟು 6 ಅರ್ಜಿದ್ದಾರರಿಗೆ ಕಾನೂನು ಬಾಹಿರವಾಗಿ ಜಮೀನು ಮಂಜೂರು ಮಾಡಲಾಗಿದೆ ಎಂಬ ದೂರಿನ ಮೆರೆಗೆ ಕಂದಾಯ  ಪ್ರಾದೇಶಿಕ ವಿಭಾಗ ಆಯುಕ್ತರಾದ ಹರ್ಷ ಗುಪ್ತ ಅವರು  ತಾಲೂಕು ಕಛೇರಿಗೆ ಬೇಟಿ ನೀಡಿ ಕಡತಗಳನ್ನು ಪರಿಶೀಲಿಸದ ನಂತರ ಅಕ್ರಮ ವೆಸಿಗಿರುವುದರ ಬಗ್ಗೆ ಮೆಲ್ನೋಟಕ್ಕೆ ಕಂಡು ಬಂದಿದ್ದ ಹಿನ್ನಲೆಯಲ್ಲಿ ತಹಸೀಲ್ದಾರ್ ಅವರನ್ನು ಅಮಾನತು ಮಾಡಿ ಅವರ  ವಿರುದ್ದ ಪೋಲಿಸ್ ಠಾಣೆಯಲ್ಲಿ ಭೂ ಕಂದಾಯ ಆದೀನಿಯಮ ಕಾಯ್ದೆಯಡಿ ಕ್ರೀಮಿನಲ್ ಪ್ರಕರಣ ದಾಖಲಿಸಿ ಪೋಲಿಸ್ ತನಿಖೆ ನಡೆಯುತ್ತಿದೆ. ಈ ವಿಚಾರದ ಬಗ್ಗೆ ಮೇಲಾಧಿಕಾರಿಗಳು  ಸ್ಥಳ ಮತ್ತು ಕಡತಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿರುವುದರಿಂದ ಕಡತಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಪ್ರತಿ ವಾರವು ಪಿಂಚಣಿ, ಕಂದಾಯ ಆದಾಲತ್ ಹಾಗೂ ಪಿ.ನಂಬರ್ ದುರಸ್ಥಿಗೊಳಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಮನೆ ಬಾಗಿಲಿಗೆ  ಕಂದಾಯ ಇಲಾಖೆಯ ಗ್ರಾಮಲೇಕ್ಕಿಗರು, ಗ್ರಾಮ ಸಹಾಯಕರು ಬಂದು ಪವತಿವಾರಸು, ಪೋಡಿ, ಸ್ಕೇಚ್, ತಿದ್ದುಪಡಿ,  ವೃದ್ದಾಪ ವೇತನ ಸೇರಿದಂತೆ ಉಚಿತವಾಗಿ ಮಾಡಿಕೊಡುವ ಕೆಲಸ ಮಾಡಲಿದ್ದಾರೆ. ಸಾರ್ವಜನಿಕರು ಮಧ್ಯವರ್ತಿಗಳ ಬಳಿ ಹೋಗಬಾರದು. ನೇರವಾಗಿ ಕಂದಾಯ ಇಲಾಖೆಯ ಅಧಿಕಾರಿಗಳ ಬಳಿ ಬಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿದ್ದು, ಅದಂತೆ ಪ್ರತಿ ಹೋಬಳಿಯಲ್ಲಿ ಒಂದು ಹಳ್ಳಿಯನ್ನು ಮಾದರಿಯಾಗಿ ತೆಗೆದುಕೊಂಡು  ಎಲ್ಲಾ ಸಮಸ್ಯೆಗಳನ್ನು ಒಂದೊಂದು ಹಳ್ಳಿಯಲ್ಲಿ ಪೂರ್ಣಗೊಳಿಸಿ ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡಲಾಗುವುದು. ತಾಲೂಕಿನಲ್ಲಿರುವ ಪಿ.ನಂಬರ್‌ಗಳನ್ನು ದುರಸ್ಥಿ ಮಾಡಲಾಗುವುದು ಸಾರ್ವಜನಿಕರು ಇದರ ಸದಯಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

 

 

 

ಫ್ರೆಶ್ ನ್ಯೂಸ್

Latest Posts

Featured Videos