ಭಾರೀ ಚಳಿಗೆ ಟೊಮೆಟೋ ಇಳುವರಿ ಕುಸಿತ: 70 ರೂ.ಗೆ ಜಿಗಿದ ಟೊಮೆಟೋ ಬೆಲೆ

ಭಾರೀ ಚಳಿಗೆ ಟೊಮೆಟೋ ಇಳುವರಿ ಕುಸಿತ: 70 ರೂ.ಗೆ ಜಿಗಿದ ಟೊಮೆಟೋ ಬೆಲೆ

ಬೆಂಗಳೂರು: ಒಂದು ಕೆ.ಜಿ.ಗೆ 10 ರೂಪಾಯಿ 20 ರೂಪಾಯಿ ಇದ್ದ ಟಮ್ಯಾಟೋ ದರ ಏಕಾಏಕಿ 70 ರೂಪಾಯಿಗೆ ಏರಿಕೆಯಾಗಿ, ಸಾಮಾನ್ಯ ಜನರಿಗೆ ಗಗನ ಕುಸುಮವಾಗಿದೆ.

ಭಾರೀ ಚಳಿಯಿಂದಾಗಿ ಟೊಮೆಟೋ ಗಿಡಗಳಲ್ಲಿ ಕಾಯಿಗಳು ಬಿಡುತ್ತಿಲ್ಲ. ಆದರಿಂದ ಟೊಮೆಟೋ ಇಳುವರಿ ಶೇ.60 ರಷ್ಟು ಇಳಿಕೆಯಾಗಿದೆ. ಇಳುವರಿ ಕಡಿಮೆಯಾದ ಬೆನ್ನಲ್ಲೇ ಟೊಮೆಟೋ ಬೆಲೆ ಏರಿಕೆಯಾಗಿದೆ.  ಆದರಿಂದ 10-20 ರೂ. ಗೆ ಸಿಗುತ್ತಿದ್ದ ಟೊಮೆಟೋ ಏಕಾಏಕಿ 70 ರೂ.ಗೆ ಏರಿಕೆಯಾಗಿದೆ. ಇನ್ನು 1 ರಿಂದ 2 ತಿಂಗಳ ಕಾಲ ಟೊಮೆಟೋ ದುಬಾರಿಯಾಗಲಿದ್ದು, ಟೊಮೆಟೋ ಬೆಳೆಗಾರರಿಗೆ ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿ ಆತಂಕಕ್ಕೀಡು ಮಾಡಿದ್ದು, ಇನ್ನು ದುಬಾರಿ ಟೊಮೊಟೋ ಕೊಳ್ಳಲು ಸಾಮಾನ್ಯ  ವರ್ಗದ ಗ್ರಾಹಕರು ಇಂದೇಟು ಹಾಕುವಂತಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos