ಯಶವಂತಪುರದಲ್ಲಿ ಬಂಡಾಯದ ಬಿಸಿ

ಯಶವಂತಪುರದಲ್ಲಿ ಬಂಡಾಯದ ಬಿಸಿ

ಬೆಂಗಳೂರು, ನ. 16: ಅಥಣಿ, ರಾಣೆಬೆನ್ನೂರು ಬಳಿಕ ಯಶವಂತಪುರದಲ್ಲಿ ಈಗ ಬಿಜೆಪಿಯಲ್ಲಿ ಈಗ ಬಂಡಾಯದ ಬಿಸಿ ಶುರುವಾಗಿದೆ.  ಅನರ್ಹ ಶಾಸಕರಿಗೆ ಪಕ್ಷ ಟಿಕೆಟ್ ಘೋಷಿಸಿದ ಹಿನ್ನೆಲೆ ಟಿಕೆಟ್ ಆಕಾಂಕ್ಷಿಯಾಗಿದ್ದ ಜಗ್ಗೇಶ್ ಮುನಿಸು ತೋರಿದ್ದು, ಸಭೆಯಿಂದ ದೂರ ಉಳಿಯುವ ಪ್ರಯತ್ನ ನಡೆಸಿದ್ದಾರೆ.

ಸಕ್ರಿಯ ರಾಜಕಾರಣಿಯಾಗಬೇಕು ಎಂಬ ಕನವರಿಕೆಯಲ್ಲಿರುವ ಜಗ್ಗೇಶ್ ವಿಧಾನಸಭಾ ಚುನಾವಣಾ ಸೋಲಿನ ಬಳಿಕ ಮತ್ತೆ ಉಪಚುನಾವಣಾ ಕಣಕ್ಕೆ ಇಳಿಯಲು ಉತ್ಸಾಹ ತೋರಿದ್ದರು. ಅಷ್ಟೇ ಅಲ್ಲದೇ ಟಿಕೆಟ್‌ಗಾಗಿ ಲಾಬಿ ಕೂಡ ನಡೆಸಿದ್ದರು. ಈಗ ಅನರ್ಹ ಶಾಸಕರಿಗೆ ಪಕ್ಷ ಮಣೆಹಾಕಿರುವುದರಿಂದ ಸಿಟ್ಟಾದ ಜಗ್ಗೇಶ್ ಸಭೆಯಿಂದ ದೂರ ಉಳಿಯುತ್ತಾ, ಬಂಡಾಯದ ಪಾತಕೆ ಹಾರಿಸಿದ್ದಾರೆ.

ಬಿಜೆಪಿ ಸೇರ್ಪಡನೆಗೊಂಡಿರುವ ಅನರ್ಹ ಶಾಸಕ ಎಸ್.ಟಿ ಸೋಮಶೇಖರ್ ಗೆಲುವಿಗಾಗಿ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಪಣತೊಟ್ಟಿದ್ದಾರೆ. ಇದೇ ಉದ್ದೇಶದಿಂದಲೇ ಪಕ್ಷದ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಸದಾನಂದಗೌಡ, ಶೋಭಾ ಕರಂದ್ಲಾಜೆ ಭಾಗಿಯಾಗಿ, ಸ್ಥಳೀಯ ನಾಯಕರ ಮನವೊಲಿಸಿ ಸೋಮಶೇಖರ್ ಗೆಲ್ಲಿಸುವ ಕುರಿತು ಚರ್ಚೆ ನಡೆಸಲಾಯಿತು. ಆದರೆ, ಈ ಸಭೆಗೆ ಗೈರಾಗುವ ಮೂಲಕ ನಟ ಜಗ್ಗೇಶ್ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಸಿಎಂ ಬಿಎಸ್ ಯಡಿಯೂರಪ್ಪ ನಡೆಸಿದ್ದ ಸಭೆಗೂ ಕೂಡ ಗೈರಾಗುವ ಮೂಲಕ ಅನರ್ಹ ಶಾಸಕರ ಪರ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಅವರು ಸೋಲನ್ನು ಕಂಡಿದ್ದರು. ಈ ಬಾರಿ ಕ್ಷೇತ್ರದ ಟಿಕೆಟ್ ತಮಗೆ ಸಿಗಲಿದೆ ಎಂದು ನಿರೀಕ್ಷಿಸಿದ ಅವರಿಗೆ ಪಕ್ಷ ಶಾಕ್ ನೀಡಿದೆ. ಇನ್ನು ಸ್ಟಾರ್ ಪ್ರಚಾರಕರಾಗಿರುವ ನಟ ಜಗ್ಗೇಶ್ ಪಕ್ಷದಿಂದ ದೂರಉಳಿದರೆ ತಮಗೆ ನಷ್ಟವಾಗಲಿದೆ ಎಂದು ಅರಿತ ಪಕ್ಷದ ನಾಯಕರು ಅವರ ಮನವೊಲಿಕೆಗೆ ಮುಂದಾಗಿದ್ದು, ಜಗ್ಗೇಶ್ ಕರಗುತ್ತಾರಾ ಕಾದು ನೋಡಬೇಕಿದೆ.

 

 

 

 

ಫ್ರೆಶ್ ನ್ಯೂಸ್

Latest Posts

Featured Videos