ಉತ್ತಮ ಜೀರ್ಣ ಕ್ರಿಯೆಗೆ ಸಿಂಪಲ್ ಪರಿಹಾರ

ಉತ್ತಮ ಜೀರ್ಣ ಕ್ರಿಯೆಗೆ ಸಿಂಪಲ್ ಪರಿಹಾರ

ಮಾ. 22, ನ್ಯೂಸ್ ಎಕ್ಸ್ ಪ್ರೆಸ್: ಜೀರ್ಣಕ್ರಿಯೆ ಸರಿಯಾಗಿ ಆಗಿಲ್ಲ ಅಂದರೆ, ಹೊಟ್ಟೆನೋವು ಹಾಗೂ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಕ್ರಮೇಣ ಇದು ಮಲ್ಲಬದ್ಧತೆಗೂ ಕಾರಣವಾಗಬಹುದು. ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುವ ವಿವಿಧ ರೀತಿಯ ಆಹಾರಗಳು ನಮ್ಮ ಮನೆಯಲ್ಲೇ ಇದೆ.

ಸೋಂಪು, ಎಳ್ಳಿನ ಬೀಜಗಳು, ಕತ್ತರಿಸಿದ ಬಾದಾಮಿ, ಇವು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸೋಂಪು: ಊಟದ ನಂತರ ಸೋಂಪನ್ನ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಯಾಕೆಂದರೆ ಇದು ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿ ಅಂತ ಜನಪ್ರಿಯವಾಗಿದೆ.

ಅಲ್ಲದೇ ಗ್ಯಾಸ್ನಿಂದ ಉಂಟಾಗುವ ನೋವು ನಿವಾರಿಸುವುದು, ಜೀರ್ಣಕ್ರಿಯೆಯನ್ನ ಉತ್ತೇಜಿಸುವುದು, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ಎಳ್ಳು: ಎಳ್ಳಿನ ಬೀಜಗಳಲ್ಲಿರುವ ಡಯೆಟರಿ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಅಗತ್ಯವಿರುವ ಫೈಬರ್ ಅನ್ನ ನಿಮ್ಮ ದೇಹಕ್ಕೆ ಒದಗಿಸುತ್ತವೆ. ಗಟ್ ಬ್ಯಾಕ್ಟೀರಿಯಾವನ್ನು ಸುಧಾರಿಸಲು ಫೈಬರ್ ಸಹಾಯ ಮಾಡುತ್ತದೆ. ಇದು ನಿಮ್ಮ ಆಹಾರಗಳೊಂದಿಗೆ ಸೇರಿದಾಗ ದೇಹದಲ್ಲಿ ಜೀರ್ಣಕಾರಿ ವ್ಯವಸ್ಥೆಯನ್ನು ಉತ್ತಮಗೊಳ್ಳುತ್ತದೆ.

ಬಾದಾಮಿ: ಬಾದಾಮಿಯಲ್ಲಿ ಕೂಡ ಫೈಬರ್ ಅಂಶ ಸಮೃದ್ಧವಾಗಿದೆ. ಸರಿಯಾದ ಪ್ರಮಾಣದಲ್ಲಿ ಬಾದಾಮಿಯನ್ನ ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಬಾದಾಮಿಗಳನ್ನ ಹೆಚ್ಚಾಗಿ ಸೇವಿಸುವುದರಿಂದ ಗಟ್ ಬ್ಯಾಕ್ಟೀರಿಯಾ ಅನುಕೂಲವನ್ನ ಒದಗಿಸುತ್ತವೆ. ಇನ್ನು ಇದರಲ್ಲಿರುವ ವಿಟಮಿನ್- ಇ ಹೃದಯದ ಆರೋಗ್ಯ ಮತ್ತು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos