ಬಾಯಿ ದುರ್ವಾಸನೆ ದೂರ ಮಾಡಲ ಇವುಗಳನ್ನ ಬಳಸಿ

ಬಾಯಿ ದುರ್ವಾಸನೆ ದೂರ ಮಾಡಲ ಇವುಗಳನ್ನ ಬಳಸಿ

ಬೆಂಗಳೂರು, ಜೂ.20: ಬಾಯಿ ಬಿಟ್ಟರೆ ಸಾಕು, ಜನ ಮಾರು ದೂರ ಓಡ್ತಾರೆ. ಕೆಲವರ ಬಾಯಿಯಿಂದ ಬರುವ ದುರ್ವಾಸನೆಯೇ ಇದಕ್ಕೆಕಾರಣ.  ದಾಲ್ಚಿನಿ : ದಾಲ್ಚಿನಿಯಲ್ಲಿ ಬ್ಯಾಕ್ಟೀರಿಯ ನಿರೋಧಕ ಗುಣಇದೆ. ಇದು ಉಸಿರಿನ ದುರ್ವಾಸನೆಯನ್ನುಹೋಗಲಾಡಿಸುತ್ತದೆ. ಇದನ್ನು ಹಾಗೆಯೇ ತಿನ್ನಬಹುದು. ಇಲ್ಲವೇ ಚಹಾದಲ್ಲಿ ಹಾಕಿ ಕುಡಿಯಬಹುದ. ಬಿಸಿ ನೀರಿಗೆಹಾಕಿಯೂ ಸೇವಿಸಬಹುದು.

ಸೋಂಪು : ಸೋಂಪು ಆರೋಗ್ಯಕ್ಕೆ ಒಳ್ಳೆಯದುಎನ್ನುತ್ತಾರೆ. ಊಟದ ನಂತರ ಇದನ್ನು ಸೇವಿಸುವುದರಿಂದಜೀರ್ಣ ಕ್ರಿಯೆ ಸುಲಭವಾಗುತ್ತದೆ. ಕೆಟ್ಟ ಉಸಿರಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಸಾಯಿಸುವುದಲ್ಲದೇ, ಗ್ಯಾಸ್ ಸಮಸ್ಯೆಯಿಂದ ಮುಕ್ತಿನೀಡುತ್ತದೆ.

ಪುದೀನಾ : ಮೌತ್ ಪ್ರೆಶನರ್ ಗಳಲ್ಲಿ ಪುದೀನಾ ಬಳಸುತ್ತಾರೆ. ಅದು ತಂಪನೆ ಅನುಭವ ನೀಡುತ್ತದೆ. ಅದರ ಚಹಾ ಕುಡಿಯುವುದರಿಂದ ಅಥವಾ ಹಾಗೇ ಪುದಿನಾ ತಿನ್ನುವುದರಿಂದ ದುರ್ವಾಸನೆ ಹೋಗಲಾಡಿಸಬಹುದು.

ಏಲಕ್ಕಿ : ಇದರ ಕಾಳುಗಳನ್ನು ಬಾಯಲ್ಲಿ ಹಾಕಿ ಜಗಿಯುಬೇಕು. ಊಟದ ನಂತರ ಏಲಕ್ಕಿ ಚಹಾ ಕುಡಿಯಬಹುದು.

ಸಾಸಿವೆ ಎಣ್ಣೆ : ಒಂದು ಚಮಚ ಸಾಸಿವೆ ಎಣ್ಣೆಯನ್ನು ಬಾಯಲ್ಲಿ 30 ಸೆಕೆಂಡ್ ಇಟ್ಟುಕೊಂಡು ನಂತರ ಉಗಿಯಿರಿ.

ಗ್ರೀನ್ ಟೀ : ನಿಮ್ಮ ಉಸಿರನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರತಿದಿನ ಒಂದು ಕಪ್ ಗ್ರೀನ್ ಟೀ ಸೇವಿಸಿ.

ಫ್ರೆಶ್ ನ್ಯೂಸ್

Latest Posts

Featured Videos