ಮನೆಯಲ್ಲಿಯೇ ಇದೆ ಎದೆ ಉರಿಗೆ ಪರಿಹಾರ

ಮನೆಯಲ್ಲಿಯೇ ಇದೆ ಎದೆ ಉರಿಗೆ ಪರಿಹಾರ

ಬೆಂಗಳುರು, ಜೂ. 28: ಆಹಾರ ಚನ್ನಾಗಿದೆ ಎಂದು ಹೊಟ್ಟೆ ತುಂಬಾ ಕೆಲವರು ತಿಂದು ಬಿಡುತ್ತಾರೆ ಆದರೆ, ಅದು ಜಿರ್ಣವಾಗದೆ ಎದೆ ಉರಿ ಉಂಟಾಗುತ್ತದೆ. ಹೌದು,ಇಂತಹ ಎದೆ ಉರಿಗೆ ಭಯಪಡುವ ಅಗತ್ಯವಿಲ್ಲ. ಮನೆಯಲ್ಲಿಯೇ ಸಿಗುವಂತಹ ಕೆಲವೊಂದು ವಸ್ತುಗಳನ್ನು ಬಳಸಿ ಎದೆ ಉರಿಯನ್ನು ನಿವಾರಿಸಬಹುದು.

ಹಸಿ ಹಾಲಿಗೆ ಜೇನು ಬೆರೆಸಿ ಕುಡಿದರೆ ಎದೆ ಉರಿ, ಹೊಟ್ಟೆ ಉರಿ ಕಡಿಮೆಯಾಗುವುದು

ಎಳೆ ಸೀಬೆಕಾಯಿಯನ್ನು ಜಜ್ಜಿ ಅದಕ್ಕೆ ನೀರು ಬೆರೆಸಿ ಕಷಾಯ ಮಾಡಿ ಮಜ್ಜಿಗೆಯೊಂದಿಗೆ ಸೇರಿಸಿ ಕುಡಿಯಿರಿ.

ಎದೆ ಉರಿಯಿದ್ದರೆ ಮೊಸರಿಗೆ ಸ್ವಲ್ಪ ಸಕ್ಕರೆ ಹಾಕಿ ತಿನ್ನುವುದು ಒಳ್ಳೆಯದು.

ನಿಂಬೆ ಶರಬತ್ತು ಮಾಡಿ ಪ್ರತಿದಿನ ಒಂದೊಂದು ಬಟ್ಟಲು ಕುಡಿಯುತ್ತಿರಿ ಇದರಿಂದ ಎದೆ ಉರಿ ಕಡಿಮೆಯಾಗುತ್ತದೆ. ಲೋಳೆಸರದ ಜ್ಯೂಸ್ ನಲ್ಲಿ ವಿಟಮಿನ್ ಎ, ಬಿ1, ಬಿ2, ಬಿ3, ಸಿ, ಇ , ರಂಜಕ ಇರುವುದರಿಂದ ಎದೆ ಉರಿ ಕಡಿಮೆಯಾಗುತ್ತದೆ.

ಕೊತ್ತಂಬರಿ ಬೀಜದ ಪುಡಿ ಮತ್ತು ಹಾಲು ಬೆರೆಸಿ ಕಷಾಯ ಮಾಡಿ ಆಗಾಗ ಕುಡಿಯುತ್ತಿದ್ದರೆ ಎದೆ ಉರಿ ಕಾಡುವುದಿಲ್ಲ.

ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿ, ಕಲ್ಲು ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ, ದಿನಕ್ಕೆ ಒಂದು ಬಾರಿ ಕುಡಿಯುತ್ತಿದ್ದರೆ ಎದೆ ಉರಿ ಕಡಿಮೆ ಆಗುವುದು.

ಎದೆ ಉರಿ ಆಗುತ್ತಿರುವಾಗ ಬಾಳೆ ಹಣ್ಣು ತಿಂದರೆ ಕೂಡಲೇ ಕಡಿಮೆಯಾಗುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos