ಉತ್ತಮ ಆರೋಗ್ಯಕ್ಕೂ ಖರ್ಜೂರ

ಉತ್ತಮ ಆರೋಗ್ಯಕ್ಕೂ ಖರ್ಜೂರ

ಬೆಂಗಳೂರು, ಜು. 18: ದಿನವೂ ಖರ್ಜೂರ ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ

* ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ದೇಹಕ್ಕೆ ಬೇಗನೆ ಶಕ್ತಿಯನ್ನು ತುಂಬುತ್ತದೆ.

* ದಿನವೂ ಖರ್ಜೂರ ತಿಂದರೆ ಹೊಟ್ಟೆಯಲ್ಲಿ ಆರೋಗ್ಯಕರವಾದ ಬ್ಯಾಕ್ಟೀರಿಯವನ್ನು ಹೆಚ್ಚು ಉತ್ಪತ್ತಿ ಮಾಡುವುದರಿಂದ ಕರುಳಿನ ಕಾರ್ಯಕ್ಕೆ ಸಹಾಯ ಮಾಡುತ್ತದೆ.

* ಖರ್ಜೂರ ತಿನ್ನುವುದರಿಂದ ಕ್ಯಾನ್ಸರ್ ರಕ್ತ ಕಣಗಳು ಹರಡುವುದನ್ನು ತಡೆಗಟ್ಟಬಹುದು.

* ಖರ್ಜೂರವನ್ನು ರಾತ್ರಿಯಲ್ಲಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದನ್ನು ಜ್ಯೂಸ್ ರೀತಿ ಮಾಡಿ ಕುಡಿಯುವುದು ಹೃದಯ ಸಮಸ್ಯೆ ಇರುವವರಿಗೆ ಒಳ್ಳೆಯದು.

* ಖರ್ಜೂರದಲ್ಲಿ ಕಬ್ಬಿಣದಂಶ ಇರುವುದರಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು.

* ಅಸಿಡಿಟಿ ಮತ್ತು ಹೃದಯದ ಉರಿ ಕಡಿಮೆಯಾಗಲು ಖರ್ಜೂರ ಸಹಾಯ ಮಾಡುತ್ತದೆ.

* ಹೆರಿಗೆಯ ನಂತರ ಎದೆ ಹಾಲು ಉತ್ಪತ್ತಿ ಹೆಚ್ಚು ಮಾಡುತ್ತದೆ ಈ ಖರ್ಜೂರ.

* ಖರ್ಜೂರ ಹಾಕಿ ಕಾಯಿಸಿದ ಹಾಲು ಮಕ್ಕಳಿಗೆ ಅತ್ಯುತ್ತಮವಾದ ಪೋಷಕಾಂಶವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos