ಹಲ್ಲಿನ ಕಲೆಗೆ ಪರಿಹಾರ

ಹಲ್ಲಿನ ಕಲೆಗೆ ಪರಿಹಾರ

ಬೆಂಗಳೂರು, ಸೆ. 18: ನಗುವೇ ಮುಖಕ್ಕೆ ಭೂಶಣನ, ನಗುವೇ ಗೆಲುವಿನ ಲಕ್ಷಣ, ನಗುವೇ ಆರೋಗ್ಯಕ್ಕೆ ಔಷಧಿ. ಹೌದು, ನಾವು ನಕ್ಕಾಗ ಕಾಣುವುದು ನಮ್ಮ ಹಲ್ಲುಗಳು. ಈ ಹಲ್ಲುಗಳು ನಾವು ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶದಿಂದ, ಸರಿಯಾಗಿ ಸ್ವಚ್ಛಗೊಳಿಸದಿದ್ದಲ್ಲಿ, ಎಲೆ ಅಡಿಕೆ, ತಂಬಾಕು ಜಗಿಯುತ್ತಿದ್ದಲ್ಲಿ ಹಲ್ಲುಗಳು ಹಳದಿ ಇಲ್ಲವೇ ಕಂದು ಬಣ್ಣಕ್ಕೆ ತಿರುಗುತ್ತವೆ. ಇಂತಹ ಕಲೆ ಹೋಗಲಾಡಿಸಲು ಈ ಕೆಳಗಿನ ಕ್ರಮ ಅನುಸರಿಸಬೇಕು.

ನಿಂಬೆ ಹಣ‍್ಣು: ಒಂದು ಚಮಚೆ ನಿಂಬೆರಸದಲ್ಲಿ ಸ್ವಲ್ಪ ಉಪ್ಪು ಬೆರೆಸಿ ಅದರಿಂದ ಹಲ್ಲು ಉಜ್ಜುವುದಲ್ಲದೇ ಸ್ವಲ್ಪ ನೀರು ಬೆರೆಸಿ ಬಾಯಿ ಮುಕ್ಕಳಿಸಬೇಕು.

ತುಳಸಿ: ತುಳಸಿ ಎಲೆಗೆ ಚಿಟಿಕೆ ಉಪ್ಪು ಬೆರೆಸಿ ನುಣ್ಣಗೆ ಅರೆದು ಅದರಿಂದ ಹಲ್ಲುಜ್ಜುವುದಲ್ಲದೇ ಒಣಗಿದ ಅಡಿಕೆಯ ಸಿಪ್ಪೆ, ಒಣಗಿದ ನಿಂಬೆಯ ಸಿಪ್ಪೆಯನ್ನು ಸಮಭಾಗದಲ್ಲಿ ತೆಗೆದುಕೊಂಡು ಬೆಂಕಿಯಲ್ಲಿ ಸುಟ್ಟು ನಂತರ ಬರುವ ಬೂದಿಗೆ ಸ್ವಲ್ಪ ಸೈಂಧವ ಲವಣದ ಪುಡಿ ಬೆರೆಸಿ ದಿನಕ್ಕೊಮ್ಮೆ ಹಲ್ಲುಜ್ಜಬೇಕು ಇದರಿಂದ ನಿಮ್ಮ ಹಲ್ಲುಗಳ ಮೇಲಿರು ಕಲೆಗಳು ಕಡಿಮೆಯಾಗುತ್ತಗದೆ.

 

ಫ್ರೆಶ್ ನ್ಯೂಸ್

Latest Posts

Featured Videos