ತೂಕ ಕಡಿಮೆ ಮಾಡುವು ಜೀರಿಗೆ

ತೂಕ ಕಡಿಮೆ ಮಾಡುವು ಜೀರಿಗೆ

ಬೆಂಗಳೂರು, ಜೂ. 24: ಸಾಮಾನ್ಯವಾಗಿ ಜನರು ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಗಂಟೆಗಟ್ಟಲೆ ಜಿಮ್ ನಲ್ಲಿ ಕಳೆಯುತ್ತಾರೆ. ದಿನದಲ್ಲಿ ಸ್ವಲ್ಪ ಸಮಯ ವ್ಯಾಯಾಮಕ್ಕೆ ಮೀಸಲಿಡುತ್ತಾರೆ. ವ್ಯಾಯಾಮ, ಜಿಮ್ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ, ಜಿಮ್ ನಲ್ಲಿ ಎಷ್ಟು ಕಸರತ್ತು ಮಾಡಿದ್ರೂ ಕೆಲವರ ತೂಕ ಮಾತ್ರ ಇಳಿಯೋದಿಲ್ಲ.

ಜೀರಿಗೆಯಲ್ಲಿ ಮೆಗ್ನೀಸಿಯಮ್, ಕ್ಯಾಲ್ಸಿಯಂ, ಸತು, ರಂಜಕ ಮತ್ತು ಕಬ್ಬಿಣದ ಅಂಶವಿರುತ್ತದೆ. ಜೀರಿಗೆ ಪುಡಿ ಸೇವನೆ ಮಾಡುವುದರಿಂದ ಸ್ವಾಭಾವಿಕರವಾಗಿ ದೇಹದ ಕೊಬ್ಬು ಕರಗುತ್ತದೆ. ಕೇವಲ 20 ದಿನ ನೀವು ಜೀರಿಗೆ ಪುಡಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಹೊಟ್ಟೆ ಕೊಬ್ಬೊಂದೇ ಅಲ್ಲ ಇಡೀ ದೇಹದ ತೂಕ 15 ಕೆ.ಜಿ.ಯಷ್ಟು ಕಡಿಮೆಯಾಗುತ್ತದೆ.

ಒಂದು ಗ್ಲಾಸ್ ನೀರಿಗೆ ದೊಡ್ಡ ಚಮಚದಲ್ಲಿ ಜೀರಿಗೆ ಹಾಕಿ ರಾತ್ರಿ ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ಆ ನೀರನ್ನು ಕುದಿಸಿ ಕುಡಿಯಿರಿ. ಉಳಿದ ಜೀರಿಗೆಯನ್ನು ಜಗಿದು ತಿನ್ನಿ. ನೆನಪಿರಲಿ ಜೀರಿಗೆ ನೀರು ಕುಡಿದ 1 ಗಂಟೆಯವರೆಗೆ ಏನನ್ನೂ ಸೇವನೆ ಮಾಡಬೇಡಿ.

ಇಂಗು, ಕಪ್ಪು ಉಪ್ಪು ಹಾಗೂ ಜೀರಿಗೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚೂರ್ಣ ಮಾಡಿ. 1-3 ಗ್ರಾಂ ಚೂರ್ಣವನ್ನು ಬೆಳಿಗ್ಗೆ ಹಾಗೂ ರಾತ್ರಿ ಮೊಸರಿನಲ್ಲಿ ಕಲಸಿ ಸೇವನೆ ಮಾಡಿ. ಇದ್ರಿಂದಲೂ ಬೊಜ್ಜು ಕಡಿಮೆಯಾಗುತ್ತದೆ.

ರಾತ್ರಿ 2 ಚಮಚ ಜೀರಿಗೆಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಆ ನೀರನ್ನು ಕುದಿಸಿ ಸೋಸಿ ಅದಕ್ಕೆ ನಿಂಬೆ ರಸವನ್ನು ಹಾಕಿ ಕುಡಿಯುವುದರಿಂದಲೂ ತೂಕ ಕಡಿಮೆಯಾಗುತ್ತದೆ. ಸತತ 2 ವಾರಗಳ ಕಾಲ ಮಾಡಿ ಪರಿಣಾಮ ಕಾಣಬಹುದಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos