ನೆಗಡಿಗೆ ಮನೆ ಮದ್ದು

ನೆಗಡಿಗೆ ಮನೆ ಮದ್ದು

ಬೆಂಗಳೂರು, ಆ. 14: ಕೆಲವರಿಗೆ ಮಳೆಗಾಲ ಶುರುವಾಗುತ್ತಿದಂತೆ ಮತ್ತು ಹವಾಮಾನ ಬದಲಾದಾಗ ನೆಗಡಿ, ಜ್ವರ ಸಾಮಾನ್ಯವಾಗಿ ಕಾಡುತ್ತದೆ. ಹೌದು, ಅನೇಕರಿಗೆ ನೆಗಡಿ ಸಮಸ್ಯೆ ಕಾಡುತ್ತದೆ. ಮಾರುಕಟ್ಟೆಯಲ್ಲಿ ಇದರ ನಿಯಂತ್ರಣಕ್ಕೆ ಸಾಕಷ್ಟು ಎಂಟಿಬಯೋಟಿಕ್ ಮಾತ್ರೆಗಳು ಸಿಗುತ್ವೆ. ಆದ್ರೆ ಅದರ ಸೇವನೆಯಿಂದ ಅಡ್ಡ ಪರಿಣಾಮಗಳಾಗುತ್ತವೆ. ಚಿಕ್ಕ ನೆಗಡಿಗೆ ವೈದ್ಯರ ಬಳಿ ಹೋಗೋದು ಕಷ್ಟ. ಮನೆ ಮದ್ದಿನ ಮೂಲಕ ಎರಡೇ ದಿನದಲ್ಲಿ ನೆಗಡಿ- ಜ್ವರವನ್ನು ಕಡಿಮೆ ಮಾಡಿಕೊಳ್ಳಬಹುದು.

ಈ ಮನೆ ಮದ್ದು ಮಾಡೋದು ಸುಲಭ. ಮೊದಲು ಕತ್ತರಿಸಿದ ಅರ್ಧ ಈರುಳ್ಳಿ, 4-5 ಬೆಳ್ಳುಳ್ಳಿ ಹಾಗೂ ಎರಡು ಚಮಚ ನಿಂಬೆ ರಸವನ್ನು ಮಿಕ್ಸಿ ಮಾಡಿಕೊಳ್ಳಿ. ನಂತ್ರ ಎರಡು ಗ್ಲಾಸ್ ನೀರನ್ನು ಕುದಿಸಿಕೊಳ್ಳಿ. ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಮಿಶ್ರಣವನ್ನು ಸೇರಿಸಿ ಸ್ವಲ್ಪ ಹೊತ್ತು ಬಿಸಿ ಮಾಡಿ.

ಬೆಳಗ್ಗೆ ಹಾಗೂ ರಾತ್ರಿ ಊಟದ ನಂತ್ರ ಇದನ್ನು ಸೇವನೆ ಮಾಡುವುದರಿಂದ ನಿಮಗೆ ಹಿತವೆನಿಸುತ್ತದೆ. ಈ ಔಷಧಿ, ಜ್ವರ ಹಾಗೂ ನೆಗಡಿಯನ್ನು  ಕಡಿಮೆ ಮಾಡುತ್ತದೆ. ಶೀತದ ವಿರುದ್ಧ ಹೋರಾಡುವ ನೈಸರ್ಗಿಕ ಔಷಧಿ ಇದು. ಇದರ ಸೇವನೆಯಿಂದ ಕೆಮ್ಮು- ಕಫ ಕಡಿಮೆಯಾಗಿ ಉಸಿರಾಟದ ಸಮಸ್ಯೆಯಿಂದಲೂ ಮುಕ್ತಿ ಸಿಗುತ್ತದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos