ತ್ವಚೆಯ ಸೌಂದರ್ಯಕ್ಕೆ ಸರಳ ಪರಿಹಾರ

ತ್ವಚೆಯ ಸೌಂದರ್ಯಕ್ಕೆ ಸರಳ ಪರಿಹಾರ

ಬೆಂಗಳೂರು, ಜೂ. 17: ಹಲವಾರು ಕಾರಣಗಳು ಮುಖದ ಸೌಂದರ್ಯ ಕೆಡಲು ಕಾರಣವಾಗುತ್ತವೆ. ವಯಸ್ಸು ಹೆಚ್ಚಾದಂತೆ, ವಾಯುಮಾಲಿನ್ಯ ಪರಿಣಾಮವಾಗಿ ಮುಖದ ಸೌಂದರ್ಯದಲ್ಲಿ ಕೊರತೆಗಳು ಕಂಡು ಬರುತ್ತವೆ.

ಬಾಳೆಹಣ್ಣನ್ನು ಕೈಯಿಂದ ಹಿಸುಕಿ ಪೇಸ್ಟ್ ರೀತಿ ಮಾಡಿ ಅದಕ್ಕೆ 1 ಚಮಚ ಹಸಿ ಹಾಲು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ಅರ್ಧ ಗ್ಲಾಸ್ ಅಕ್ಕಿಯನ್ನು ನೀರಿಗೆ ನೆನೆ ಹಾಕಿ ಅರ್ಧ ಗಂಟೆಯ ಬಳಿಕ ಆ ನೀರಿನಿಂದ ಮುಖ ತೊಳೆಯಿರಿ, ಆ ನೀರು ಮುಖದಲ್ಲಿ ಹಾಗೇ ಒಣಗಲಿ. ಅರ್ಧ ಗಂಟೆಯ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು ಅದರ ಸಿಪ್ಪೆ ಸುಲಿದು ತುರಿಯಿರಿ. ಈಗ ಇದಕ್ಕೆ ಅರ್ಧ ದಾಳಿಂಬೆಯ ಬೀಜಗಳನ್ನು ಹಾಕಿ 1 ಚಮಚ ನೀರು ಹಾಕಿ ಗ್ರೈಂಡ್ ಮಾಡಿ, ನಂತರ 1 ಚಮಚ ನಿಂಬೆ ಸರ ಸೇರಿಸಿ. ನಂತರ ಇವುಗಳನ್ನು ಐಸ್ ಕ್ಯೂಬ್ ಟ್ರೇಗೆ ಹಾಕಿ ಫ್ರೀಜರ್ನಲ್ಲಿ ಇಡಿ. ದಿನಾ ಒಂದೊಂದು ಐಸ್ ಕ್ಯೂಬ್ ತೆಗೆದು 5 ನಿಮಿಷ ಮಸಾಜ್ ಮಾಡಿ ನಂತರ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ.

 

ಫ್ರೆಶ್ ನ್ಯೂಸ್

Latest Posts

Featured Videos