ಸೌಂದರ್ಯಕ್ಕೆ ದಾಲ್ಚಿನ್ನಿ

ಸೌಂದರ್ಯಕ್ಕೆ ದಾಲ್ಚಿನ್ನಿ

ಬೆಂಗಳುರು, ಜೂ.14: ದಾಲ್ಚಿನ್ನಿ ಚಕ್ಕೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದನ್ನು ಯಾವ ಅಡುಗೆಯಲ್ಲಿ ಹಾಕಿದರೂ ಘಮಘಮಿಸುವ ಸುವಾಸನೆ ಬರುತ್ತದೆ. ಅಡುಗೆ ಮನೆಯಲ್ಲಿ ಈ ಚಕ್ಕೆ ಇದ್ದೇ ಇರುತ್ತದೆ.
ಕೂದಲು ಉದುರುವಿಕೆ:ಕೂದಲು ಉದುರಿ ಬಕ್ಕತಲೆ ಆಗುತ್ತಿದ್ದರೆ, ಬಿಸಿ ಮಾಡಿದ ಆಲೀವ್ ಎಣ್ಣೆ, 1 ಟೀ ಸ್ಪೂನ್ ಜೇನು, 1 ಟೀ ಸ್ಪೂನ್ ದಾಲ್ಚಿನ್ನಿ ಚಕ್ಕೆ ಪುಡಿ ಬೆರೆಸಿ ಆ ಮಿಶ್ರಣವನ್ನು ಸ್ನಾನಕ್ಕೆ ಮುನ್ನ ತಲೆಗೆ ಹಚ್ಚಿ 15 ನಿಮಿಷಗಳ ನಂತರ ತಲೆಸ್ನಾನ ಮಾಡಬೇಕು.
ಮೊಡವೆ: ಮುಖದ ಮೇಲೆ ಮೊಡವೆಗಳಿದ್ದರೆ 3 ಟೇಬಲ್ ಸ್ಪೂನ್ ಜೇನು, 1 ಸ್ಪೂನ್ ದಾಲ್ಚಿನ್ನಿ ಚಕ್ಕೆ ಪುಡಿ ಬೆರೆಸಿ ಮಿಶ್ರಣ ಮಾಡಿಕೊಳ್ಳಬೇಕು. ಮಲಗುವ ಮುನ್ನ ಮಿಶ್ರಣವನ್ನು ಮೊಡವೆಗಳಿಗೆ ಹಚ್ಚಿ ಮಾರನೆಯ ದಿನ ನಿದ್ರೆಯಿಂದ ಎದ್ದ ಬಳಿಕ ಉಗುರು ಬೆಚ್ಚನೆಯ ನೀರಿನಿಂದ ಮುಖ ತೊಳೆಯಬೇಕು.
ಚರ್ಮದ ಇನ್ಫೆಕ್ಷನ್: ಚರ್ಮದ ಮೇಲೆ ಇನ್ಫೆಕ್ಷನ್ ನಿಂದ ಉಂಟಾಗುವ ಎಕ್ಸಿಮಾ, ಹುಳುಕಡ್ಡಿ ಮುಂತಾದ ಚರ್ಮವ್ಯಾಧಿಗಳಿಗೆ ಜೇನು ಮತ್ತು ದಾಲ್ಚಿನ್ನಿ ಚಕ್ಕೆ ಪುಡಿ ಸಮಪ್ರಮಾಣದಲ್ಲಿ ತೆಗೆದುಕೊಂಡು ಹಚ್ಚಬೇಕು.

ಫ್ರೆಶ್ ನ್ಯೂಸ್

Latest Posts

Featured Videos