ಮೊಟ್ಟೆ ಸೇವನೆಯಿಂದ ಮಧುಮೇಹ ದೂರ

ಮೊಟ್ಟೆ ಸೇವನೆಯಿಂದ ಮಧುಮೇಹ ದೂರ

. 3, ನ್ಯೂಸ್ ಎಕ್ಸ್ ಪ್ರೆಸ್: ಪ್ರತಿದಿನ ಮೊಟ್ಟೆ ಸೇವನೆಯಿಂದ ಮಧುಮೇಹ ದೂರ ಇಡಬಹುದು ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.

ನಿರ್ದಿಷ್ಠ ಲಿಪಿಡ್ ಅಣುಗಳನ್ನೊಳಗೊಂಡ ಹೆಚ್ಚಿನ ಮೊಟ್ಟೆ ಸೇವಿಸುತ್ತಿದ್ದ ಪುರುಷರ ರಕ್ತದ ಮಾದರಿಗಳನ್ನು ಟೈಪ್-2 ಡಯಾಬಿಟಿಸ್ ನಿಂದ ಮುಕ್ತವಾಗಿರುವಂತಹ ಪುರುಷರ ರಕ್ತದ ಮಾದರಿಯೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಸಕಾರಾತ್ಮಕ ಅಂಶ ಕಂಡುಬಂದಿದೆ.

ವಿವಾದಾತ್ಮಾಕ ಆಹಾರ ಪದಾರ್ಥಗಳಲ್ಲಿ ಮೊಟ್ಟೆ ಕೂಡಾ ಒಂದಾಗಿದೆ. ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಅಂಶದಿಂದಾಗಿ ಮೊಟ್ಟೆಯನ್ನು ಹೆಚ್ಚಾಗಿ  ಸೇವಿಸಬಾರದು ಎಂಬುದು ಕೆಲವರ ಅಭಿಮತ.

ಮೊಟ್ಟೆಯಲ್ಲಿ ಪ್ರೋಟಿನ್ ಅಂಶ ಹೆಚ್ಚಾಗಿದ್ದು, ಆರೋಗ್ಯಕ್ಕೆ ಉತ್ತಮ ಎಂದು ಮತ್ತೆ ಕೆಲವರು  ಹೇಳುತ್ತಾರೆ.

ಮೊಟ್ಟೆ ಸೇವನೆಯಿಂದ ಮಧುಮೇಹದಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ಅಧ್ಯಯನದಿಂದ ಸಲಹೆ ನೀಡಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos