ಬಾಳೆ ಎಲೆಯಲ್ಲಿ ಔಷಧೀಯ ಗುಣಗಳು

ಬಾಳೆ ಎಲೆಯಲ್ಲಿ ಔಷಧೀಯ ಗುಣಗಳು

ಬೆಂಗಳೂರು, ಜೂನ್.13: ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತ ತಿಳಿದೇ ಇದೆ. ಕೇವಲ ಆರೋಗ್ಯಕ್ಕಷ್ಟೇ ಅಲ್ಲದೇ ಚರ್ಮಗಳಲ್ಲಿ ಕಾಣಿಸುವ ಅನೇಕ ಸಮಸ್ಯೆಗಳನ್ನು ಬಾಳೆ ಎಲೆಗಳಿಂದ ದೂರ ಮಾಡಿಕೊಳ್ಳಬಹುದು. ಬಾಳೆ ಎಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.

ಚಿಕ್ಕ ಗಾಯವಾಗಿದ್ದರೆ ಬಾಳೆ ಎಲೆಯ ರಸ ಹಾಕಿದರೆ ಗುಣಮುಖವಾಗುತ್ತದೆ.

ತಲೆ ಹೊಟ್ಟಿನ ಸಮಸ್ಯೆ ಇದ್ದರೆ ಅದನ್ನು ಗುಣ ಪಡಿಸುವಲ್ಲಿ ಬಾಳೆ ಎಲೆ ತುಂಬಾ ಸಹಕಾರಿ. ಕುಡಿ ಬಾಳೆ ಎಲೆಯನ್ನು ಪೇಸ್ಟ್ ರೀತಿ ಮಾಡಿ ಅದನ್ನು ತಲೆಗೆ ಹಚ್ಚಿ ನಂತರ ತಣ್ಣೀರಿನಿಂದ ತೊಳೆದರೆ ಹೊಟ್ಟು ನಿವಾರಣೆಯಾಗುತ್ತದೆ.

ಯಾವುದಾದರೂ ಕೀಟ, ಜೇನು, ನೊಣ ಅಥವಾ ಚೇಳು ಕಚ್ಚಿದಾಗ ಅಥವಾ ತ್ವಚೆಯಲ್ಲಿ ಅಲರ್ಜಿ ಉಂಟಾದರೆ ಬಾಳೆ ಎಲೆ ರಸ ಹಾಕಿದರೆ ಗುಣಮುಖವಾಗುತ್ತದೆ.

ಬೆಲೆ ಬಾಳುವ ಸೌಂದರ್ಯವರ್ಧಕ ಕ್ರೀಮ್ ಗಳಲ್ಲಿ ಅಲ್ಲನ್ ಟೋಯಿನ್ ಎಂಬ ಅಂಶವಿರುತ್ತದೆ. ಇದು ತ್ವಚೆ ಸಂರಕ್ಷಣೆಗೆ ಸಹಕಾರಿಯಾಗಿದೆ. ಬಾಳೆ ಎಲೆಯಲ್ಲಿ ಕೂಡ ಈ ಅಂಶವಿರುವುದರಿಂದ ಬ್ಯಾಕ್ಟೀರಿಯಾಗಳಿಂದ ತ್ವಚೆಯನ್ನು ರಕ್ಷಿಸಬಹುದು.

ಹಸಿ ಮೆಣಸಿನಕಾಯಿ ಗಿಡದ ಕುಡಿ ಎಲೆ, ದೊಡ್ಡ ಪತ್ರೆ ಎಲೆ ಮತ್ತು ಬಾಳೆ ಎಲೆ ಇವುಗಳ ರಸವನ್ನು ಮಿಶ್ರ ಮಾಡಿ ಹಚ್ಚಿದರೆ ತ್ವಚೆಯಲ್ಲಿರುವ ಕಲೆ, ತುರಿಕೆ ಸಮಸ್ಯೆಗಳನ್ನು ನಿವಾರಿಸಬಹುದು.

ಡಯಾಫರ್ ಅಥವಾ ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (ಬೀಸ್ ವ್ಯಾಕ್ಸ್) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುತ್ತದೆ.

ಒಂದು ಕ್ಯೂಬ್ ಐಸ್ ತೆಗೆದುಕೊಂಡು ಅದನ್ನು ಬಾಳೆ ಎಲೆಯಲ್ಲಿ ಸುತ್ತಿ, ಅದರಿಂದ ಮಸಾಜ್ ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos