ಮುಖ ಕಾಂತಿಯುತವಾಗಬೇಕಾದರೆ ಹೀಗೆ ಮಾಡಿ

ಮುಖ ಕಾಂತಿಯುತವಾಗಬೇಕಾದರೆ ಹೀಗೆ ಮಾಡಿ

ಬೆಂಗಳೂರು, ಜೂನ್.11, ನ್ಯೂಸ್ ಎಕ್ಸ್ ಪ್ರೆಸ್: ಬಿಸಿಲು, ಮಳೆ, ಚಳಿಗಾಲಗಳಿಗೆ ತಕ್ಕಂತೆ ಮುಖದ ಕಾಂತಿ ಕಾಪಾಡಿಕೊಳ್ಳೋದು ಹದಿಹರೆಯದವರಿಗೆ ಚಾಲೆಂಜ್. ಹಾಗಂತ ಬರೀ ಕೆಮಿಕಲ್ ಕ್ರೀಮ್ ಗಳ ಮೊರೆ ಹೋಗೋದರ ಬದಲು ಮನೆಯಲ್ಲೇ ಸಿಗೋ ನ್ಯಾಚುರಲ್ ವಸ್ತುಗಳಿಂದ ಮುಖದ ಅಂದ ಹೆಚ್ಚಿಸಿಕೊಳ್ಳಬಹುದು.

ಹಾಲು: ಹಾಲಿಗೆ ನೈಸರ್ಗಿಕವಾಗಿ ಬ್ಲೀಚ್ ಮಾಡೋ ಗುಣವಿದೆ. ಸ್ವಲ್ಪ ಹಾಲಿಗೆ 3-4 ಹನಿ ನಿಂಬೆರಸ , 1 ಟೇಬಲ್ ಸ್ಪೂನ್ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ 20 ನಿಮಿಷಗಳ ಬಳಿಕ ತೊಳೆಯಿರಿ. ಹೀಗೆ ಪ್ರತಿದಿನ ಮಾಡೋದ್ರಿಂದ 1 ವಾರದೊಳಗಾಗಿ ರಿಸಲ್ಟ್ ನಿಮಗೇ ಗೊತ್ತಾಗುತ್ತೆ.

ಸಿಹಿಕುಂಬಳಕಾಯಿ:  ಕುಂಬಳಕಾಯಿ ಆಂಟಿ ಆಕ್ಸಿಡೆಂಟ್ಗಳ ಆಗರ. ತ್ವಚೆಯ ಸೌಂದರ್ಯಕ್ಕೆ ಹೇಳಿ ಮಾಡಿಸಿದ್ದು. ಇದರಲ್ಲಿ ಬೀಟಾ ಕ್ಯಾರಟಿನ್, ವಿಟಮಿನ್-ಸಿ ಹಾಗೂ ಎ ಇರುತ್ತೆ. ಕುಂಬಳಕಾಯಿ ತಿರುಳನ್ನ ತೆಗೆದು ಮಿಕ್ಸಿಯಲ್ಲಿ ರುಬ್ಬಿ. ಈ ಮಿಶ್ರಣಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.

ಅಕ್ಕಿಹಿಟ್ಟು:ಸ್ವಲ್ಪ ಅಕ್ಕಿಹಿಟ್ಟಿಗೆ ಹಾಲು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಮುಖಕ್ಕೆ ಹಚ್ಚಿ 10 ನಿಮಿಷದ ನಂತ್ರ ವೃತ್ತಾಕಾರವಾಗಿ ಮಸಾಜ್ ಮಾಡಿ. ಇದ್ರಿಂದ ಡೆಡ್ ಸ್ಕಿನ್ ಹೋಗಿ ಮುಖ ಕಾಂತಿಯುಕ್ತವಾಗುತ್ತದೆ. ಅಕ್ಕಿಹಿಟ್ಟು ನ್ಯಾಚುರಲ್ ಸ್ಕ್ರಬ್ ಆಗಿ ಕೆಲಸ ಮಾಡುತ್ತೆ.

ನಿಂಬೆಹಣ್ಣು: ನಿಂಬೆಹಣ್ಣಿನಲ್ಲಿ ಬ್ಲೀಚಿಂಗ್ ಗುಣ ಇರೋದ್ರಿಂದ ನಿಂಬೆರಸ ಅಥವಾ ನಿಂಬೆಹೋಳನ್ನೇ ಮುಖಕ್ಕೆ ನೇರವಾಗಿ ಮಸಾಜ್ ಮಾಡಿದ್ರೆ ಸ್ಕಿನ್ ಲೈಟ್ ಆಗುತ್ತಾ ಹೋಗುತ್ತದೆ.

ಜೇನುತುಪ್ಪ ಮತ್ತು ಕಾಫಿ :ಮಾಸ್ಕ್ ಮುಖದ ಕಾಂತಿಗೆ ಅದ್ಭುತ ಫಲಿತಾಂಶ ನೀಡುತ್ತದೆ. ಕಾಫಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗುಣಗಳು ಇದ್ದರೆ ಜೇನುತುಪ್ಪದಲ್ಲಿ ಮಾಯಿಶ್ಚರೈಸಿಂಗ್ ಗುಣಗಳು ಇವೆ. ಇದು ಚರ್ಮಕ್ಕೆ ತಕ್ಷಣ ಮತ್ತು ದೀರ್ಘ ಕಾಲದ ಕಾಂತಿ ನೀಡುತ್ತದೆ.

ಕ್ಲೆನ್ಸಿಂಗ್: ಯಾವುದೇ ಕಾರಣಕ್ಕೂ ಮಲಗೋ ಮುನ್ನ ಮುಖದಲ್ಲಿರುವ ಮೇಕಪ್ ಹಾಗೇ ಬಿಡಬೇಡಿ. ಪ್ರತಿದಿನ ಮಲಗೋ ಮುನ್ನ ಹಾಲಿನಿಂದ ಕ್ಲೆನ್ಸಿಂಗ್ ಮಾಡಿದರೆ ಮುಖದ ಕಾಂತಿ ಹೆಚ್ಚುವುದು.

 

ಫ್ರೆಶ್ ನ್ಯೂಸ್

Latest Posts

Featured Videos