ಉರಿ ಮೂತ್ರ ಸಮಸ್ಯೆಗೆ ಮನೆಮದ್ದು

ಉರಿ ಮೂತ್ರ ಸಮಸ್ಯೆಗೆ ಮನೆಮದ್ದು

ಬೆಗಳೂರು, ಜೂನ್.10, ನ್ಯೂಸ್ ಎಕ್ಸ್ ಪ್ರೆಸ್: ಸಾಮಾನ್ಯವಾಗಿ ಉರಿಮೂತ್ರ ಸಮಸ್ಯೆ ಎಲ್ಲರಿಗೂ ಕಾಡುತ್ತದೆ. ದೇಹದಲ್ಲಿ ಉಷ್ಣ ಹೆಚ್ಚಿದಾಗ, ಮೂತ್ರ ನಾಳದ ಸೋಂಕಿನಿಂದ ಈ ಸಮಸ್ಯೆ ಕಾಡುತ್ತದೆ. ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದನ್ನು ನಿವಾರಣೆ ಮಾಡಲು ಒಂದಿಷ್ಟು ಮನೆಮದ್ದುಗಳನ್ನು ನೀವು ಪಾಲಿಸಿ.

ಪಾರಿಜಾತ ಎಲೆಯ ರಸಕ್ಕೆ ಜೇನುತುಪ್ಪ ಮತ್ತು ಸ್ವಲ್ಪ ಸೈಂಧವ ಉಪ್ಪನ್ನು ಸೇರಿಸಿ ಸೇವಿಸಿ.

ಉರಿ ಮೂತ್ರ ಇದ್ದರೆ ಬೆಟ್ಟದ ನೆಲ್ಲಿಕಾಯಿ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಕಾದು ಆರಿಸಿದ ನೀರಲ್ಲಿ ಸೇರಿಸಿ ಕುಡಿಯಬೇಕು.

ಸೊಗದೆ ಬೇರಿನ ಪುಡಿಯನ್ನು ಹಸುವಿನ ಹಾಲಲ್ಲಿ ಬೆರೆಸಿ ಸೇವಿಸಿದರೆ ಉರಿ ಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ. ಈರುಳ್ಳಿ ರಸವನ್ನು ನಿಯಮಿತವಾಗಿ ಸೇವಿಸಿದರೆ ಉರಿ ಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ.

ಪಾರ್ಸ್ಲೆ ಎಲೆಗಳನ್ನು ಕೊಂಚ ಹಾಲು, ನೀರು ಮತ್ತು ಕಲ್ಲುಸಕ್ಕರೆ ಸೇರಿಸಿ ಮಿಕ್ಸಿ ಮಾಡಿ ಪ್ರತಿದಿನ ಸೇವನೆ ಮಾಡಿದರೆ ಉರಿ ಮೂತ್ರ ಸಮಸ್ಯೆ ಕಡಿಮೆಯಾಗುತ್ತದೆ.

ವಿಟಮಿನ್ ಸಿ ಹೆಚ್ಚಿರುವ ಕಿತ್ತಳೆ, ಮೂಸಂಬಿ, ಲಿಂಬೆ, ಅನಾನಾಸು, ಸ್ಟ್ರಾಬೆರಿ, ಟೊಮಾಟೋ ಮೊದಲಾದ ಹಣ್ಣುಗಳನ್ನು ಸೇವಿಸಿ.

ಎಳನೀರು ಉಲ್ಬಣಗೊಂಡ ಉರಿಮೂತ್ರಕ್ಕೂ ಉತ್ತಮ ಔಷಧಿಯಾಗಿದೆ.ಒಂದೆರಡು ದಿನಗಳಲ್ಲಿಯೇ ಉರಿಮೂತ್ರ ಕಡಿಮೆಯಾಗುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos