ಗೇರು ಹಣ್ಣು ಆರೋಗ್ಯಕ್ಕೆ ಮಹಾ ಮದ್ದು.!

ಗೇರು ಹಣ್ಣು ಆರೋಗ್ಯಕ್ಕೆ ಮಹಾ ಮದ್ದು.!

ಬೆಂಗಳೂರು, ಮೇ. 28, ನ್ಯೂಸ್ ಎಕ್ಸ್ ಪ್ರೆಸ್: ಹಳ್ಳಿಗಳಲ್ಲಿ ಗೇರು ಹಣ್ಣು ಸಿಗುವುದು ಹೆಚ್ಚು. ಕೊಳ್ಳಲು ಸಿಗುವುದೂ ಕಡಿಮೆಯೇ. ಆದರೂ ಮಕ್ಕಳಿಂದ ಹಿಡಿದು ಎಲ್ಲರೂ ಇದನ್ನ ಇಷ್ಟ ಪಡುತ್ತಾರೆ. ಹಳ್ಳಿಗರು ಇದನ್ನು ತಿನ್ನೋದು ಕಾಮನ್. ಇದರಿಂದ ಎಷ್ಟೆಲ್ಲಾ ಉಪಯೋಗ ಇವೆ ಎಂಬುವುದು ಮಾತ್ರ ಎಲ್ಲರಿಗೂ ಗೊತ್ತಿರುವುದಿಲ್ಲ.

– ಗೇರು ಹಣ್ಣಿನಲ್ಲಿರುವ ವಿಟಮಿನ್ ಬಿ 1, ಬಿ 3, ಕ್ಯಾಲ್ಷಿಯಂ, ಬೀಟಾ ಕ್ಯಾರೋಟಿನ್ ಅರೋಗ್ಯವನ್ನು ವರ್ಧಿಸುತ್ತದೆ. ಆದುದರಿಂದ ವಾರದಲ್ಲಿ 3 ಬಾರಿ ಈ ಹಣ್ಣಿನ ಜ್ಯೂಸ್ ಸೇವಿಸಿ.

– ಪ್ರತಿದಿನ ಗೇರು ಹಣ್ಣು ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತು ಹುಳು ಸಾಯುತ್ತದೆ. ಇದು ಹೊಟ್ಟೆ ನೋವಿಗೆ ಮದ್ದು.

– ದೇಹಕ್ಕೆ ಅಗತ್ಯವಾಗಿ ಬೇಕಾಗುವಂತಹ ಕಬ್ಬಿಣಾಂಶ ಈ ಹಣ್ಣಿನಲ್ಲಿದೆ. ಇದರಿಂದ ರಕ್ತ ಹೀನತೆ ಸಮಸ್ಯೆಯೂ ಕಾಡುವುದಿಲ್ಲ. ಕೆಂಪು ರಕ್ತ ಕಣ ಹೆಚ್ಚುತ್ತದೆ.

– ಗೇರುಹಣ್ಣಿನಲ್ಲಿ ಕಿತ್ತಳೆ ಹಣ್ಣಿನ ಜ್ಯೂಸ್ನಿಂದ ಸಿಗುವ ಸಿ ವಿಟಮಿನ್ನ ಶೇ.5ದಷ್ಟು ವಿಟಮಿನ್ ಸಿ ಸಿಗುತ್ತದೆ.

-ಜೀರ್ಣಕ್ರಿಯೆ ಉತ್ತಮಗೊಳಿಸಿ, ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಲು ಈ ಹಣ್ಣು ಉತ್ತಮ.

– ಈ ಹಣ್ಣಿನಲ್ಲಿ ಗಾಯಗಳನ್ನು ಅತಿ ಬೇಗನೇ ವಾಸಿ ಮಾಡುವ ಗುಣವಿದೆ.

– ಬಾಯಿ ಹುಣ್ಣು, ಹಲ್ಲಿನ ಹುಳುಕು ಇದ್ದರೆ ಈ ಹಣ್ಣನ್ನು ಸೇವಿಸಿ. ಇದರಲ್ಲಿರುವ ಅನಾಕಾರ್ಡಿಕ್ ಆಮ್ಲ ಹಲ್ಲಿನ ಸಮಸ್ಯೆ ನಿವಾರಿಸುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos