‘ಕ್ಯಾರೆಟ್’ನಿಂದ ಉತ್ತಮ ಆರೋಗ್ಯ

‘ಕ್ಯಾರೆಟ್’ನಿಂದ  ಉತ್ತಮ ಆರೋಗ್ಯ

ಬೆಂಗಳೂರು, ಮೇ. 25, ನ್ಯೂಸ್ ಎಕ್ಸ್ ಪ್ರೆಸ್: ಕ್ಯಾರೆಟ್ ಕಣ್ಣಿಗೆ ಒಳ್ಳೆಯದು ಎಂದು ನಮಗೆಲ್ಲಾ ಗೊತ್ತು. ನಿತ್ಯ ಕ್ಯಾರೆಟ್ ತಿನ್ನುತ್ತಿದ್ದರೆ ಇನ್ನೂ ಹಲವು ಆರೋಗ್ಯಕರ ಲಾಭಗಳನ್ನು ಪಡೆಯಬಹುದು.

ತೂಕ ಇಳಿಕೆಗೆ: ತೂಕ ಕಳೆದುಕೊಳ್ಳಲು ಬಯಸುವವರು ಕ್ಯಾರೆಟ್ ಸೇವನೆ ಮಾಡಬೇಕು. ಇದರಲ್ಲಿ ಫೈಬರ್ ಅಂಶ ಹೆಚ್ಚಿದೆ. ಇದು ನಮ್ಮ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಜೀರ್ಣಕ್ರಿಯೆಗೆ: ಮೊದಲೇ ಹೇಳಿದಂತೆ ಇದರಲ್ಲಿ ಜೀರ್ಣಕ್ರಿಯೆಗೆ ಅಗತ್ಯವಾದ ಅಂಶವಿದೆ. ಹೀಗಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಮಲಬದ್ಧತೆ, ಅಸಿಡಿಟಿಯಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಹೃದಯ ಆರೋಗ್ಯ: ಕ್ಯಾರೆಟ್ ಸೇವನೆಯಿಂದ ಹೃದಯದ ರಕ್ತನಾಳಗಳ ದ್ವಾರದಲ್ಲಿ ಬೇಡದ ಕೊಬ್ಬು ಸಂಗ್ರಹವಾಗುವುದನ್ನು ತಡೆಗಟ್ಟಬಹುದು. ಕೊಬ್ಬಿನಂಶ ನಿಯಂತ್ರಿಸುವುದರಿಂದ ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ರೋಗ ನಿರೋಧಕ ಶಕ್ತಿ: ಕ್ಯಾರೆಟ್ ನಲ್ಲಿ ಪೋಷಕಾಂಶಗಳು, ಆಂಟಿ ಆಕ್ಸಿಡೆಂಟ್, ಖನಿಜಾಂಶಗಳು ಸಾಕಷ್ಟಿದ್ದು ಉತ್ತಮ ರೋಗ ನಿರೋಧಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos