ಟೋಮ್ಯಾಟೋದಲ್ಲಿರುವ ಆರೋಗ್ಯದ ಗುಟ್ಟು

ಟೋಮ್ಯಾಟೋದಲ್ಲಿರುವ ಆರೋಗ್ಯದ ಗುಟ್ಟು

ಏ. 2, ನ್ಯೂಸ್ ಎಕ್ಸ್ ಪ್ರೆಸ್: ಬರೀ ಅಡಿಗೆಗೆ ರುಚಿ ನೀಡುತ್ತೆ ಅಂತಾ ಅಂದುಕೊಂಡಿರುವ ಟೋಮ್ಯಾಟೋದಲ್ಲಿರುವ ಆರೋಗ್ಯದ ಪ್ರಯೋಜನಗಳನ್ನ ಕೇಳಿದರೆ ನಿಮಗೂ ಟೋಮ್ಯಾಟೋ ಮೇಲೆ ಲವ್ ಆಗೋದಂತೂ ಖಂಡಿತ.

ಟೋಮ್ಯಾಟೋದಲ್ಲಿ ಲೈಕೋಪೀನ್ ಎಂಬ ಅಂಶ ಸಮೃದ್ಧವಾಗಿದೆ. ಟೊಮ್ಯಾಟೋ ಉತ್ಪನ್ನಗಳನ್ನು ತಿನ್ನೋದರಿಂದ ಹೃದಯರಕ್ತನಾಳದ ಕಾಯಿಲೆ, ಆಸ್ಟಿಯೊಪೊರೋಸಿಸ್, ಮಧುಮೇಹ, ಮತ್ತು ಪ್ರಾಸ್ಟೇಟ್, ಶ್ವಾಸಕೋಶ, ಸ್ತನ ಮತ್ತು ಕರುಳಿನ ಕ್ಯಾನ್ಸರ್ ಸೇರಿದಂತೆ ಕೆಲವು ಕ್ಯಾನ್ಸರ್ಗಳ ಅಪಾಯವನ್ನ ಕಡಿಮೆ ಮಾಡುತ್ತದೆ. ಟೋಮ್ಯಾಟೋಗೆ ಸಕ್ಕರೆ ಹಾಕಿ ದಿನನಿತ್ಯ ತಿನ್ನುತ್ತಿದ್ದರೇ ದೇಹದಲ್ಲಿ ರಕ್ತದ ಚಲನೆ ಹೆಚ್ಚಾಗುತ್ತದೆ.

ಹೆಚ್ಚು ಕೊಬ್ಬಿನಾಂಶದಿಂದ ಕೂಡಿದ ಆಹಾರಗಳಿಂದ ಉಂಟಾಗುವ ಲಿವರ್ ಕ್ಯಾನ್ಸರ್ನ ಅಪಾಯವನ್ನ ಕಡಿಮೆ ಮಾಡುತ್ತದೆ.

ಆ್ಯಂಟಿ-ಆ್ಯಕ್ಸಿಡೆಂಟ್ , ಇನ್ಫ್ಲಾಮೇಶನ್ ಮತ್ತು ಲಿವರ್ ಕ್ಯಾನ್ಸರ್ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಾಯ ಮಾಡುವ ಪ್ರಬಲವಾದ , ಆ್ಯಂಟಿ ಕ್ಯಾನ್ಸರ್ ಏಜೆಂಟ್ ಆಗಿ ಟೋಮ್ಯಾಟೋ ಕೆಲಸ ಮಾಡುತ್ತದೆ .

ಟೊಮ್ಯಾಟೋನಲ್ಲಿ ವಿಟಮಿನ್ ಇ, ವಿಟಮಿನ್ ಸಿ, ಫೋಲೇಟ್, ಮಿನರಲ್ಸ್, ಫೀನಾಲಿಕ್ ಸಂಯುಕ್ತಗಳು ಸಮೃದ್ಧವಾಗಿದೆ. ಇದಲ್ಲದೇ ಹಾನಿಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ .

ಸೀಬೆಹಣ್ಣು, ಕಲ್ಲಂಗಡಿ, ದ್ರಾಕ್ಷಿ, ಪಪ್ಪಾಯಿ ಸೇರಿದಂತೆ ಇತರ ಆಹಾರ ಪದಾರ್ಥಗಳಲ್ಲೂ ಲೈಕೋಪೀನ್ ಅಂಶವಿದೆ. ಆದರೆ ಈ ಪದಾರ್ಥಗಳಿಗೆ ಹೋಲಿಸಿಕೊಂಡರೆ, ಟೋಮ್ಯಾಟೋಗಳಲ್ಲಿ ಸ್ವಲ್ಪ ಅಧಿಕ ಪ್ರಮಾಣದಲ್ಲಿದೆ.

ಫ್ರೆಶ್ ನ್ಯೂಸ್

Latest Posts

Featured Videos