ಒಸಡು ನೋವಿಗೆ ಮನೆ ಮದ್ದು

ಒಸಡು ನೋವಿಗೆ ಮನೆ ಮದ್ದು

ಬೆಂಗಳೂರು, ಮೇ. 15, ನ್ಯೂಸ್ ಎಕ್ಸ್ ಪ್ರೆಸ್: ಹಲ್ಲು ನೋವಿನಿಂದ ಬಳಲಿರುವ ಪ್ರತಿಯೊಬ್ಬರಿಗೂ ಅದರ ನೋವಿನ ಬಗ್ಗೆ ತಿಳಿದೇ ಇದೆ. ಆದರೆ ಹಲ್ಲಿಗಿಂತ ಮೊದಲು ಒಸಡಿನ ನೋವು ಕಾಣಿಸಿಕೊಳ್ಳುತ್ತದೆ. ಇದು ಕೂಡ ಹಲ್ಲಿನ ಸಮಸ್ಯೆಯೇ ಆಗಿದೆ.

ಅರಿಶಿಣ: ಇದರಲ್ಲಿ ಉರಿಯೂತ ಶಮನಕಾರಿ ಮತ್ತು ಸೂಕ್ಷ್ಮ ಜೀವಿ ವಿರೋಧಿ ಗುಣವು ಅಧಿಕವಾಗಿದೆ. 1 ಚಮಚ ಅರಿಶಿಣವನ್ನು ನೀರಿನೊಂದಿಗೆ ಕಲಸಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್‌ ನಿಂದ ಹಲ್ಲುಜ್ಜಿಕೊಳ್ಳಿ. ಪ್ರತಿ ದಿನ ಅರಿಶಿಣದಿಂದ ಹಲ್ಲುಜ್ಜುತ್ತಾ ಇದ್ದರೆ ಸೋಂಕು ರಹಿತ ಬಾಯಿ ನಿಮ್ಮದಾಗುತ್ತದೆ.

ಉಪ್ಪು ನೀರು: ಒಸಡಿನಲ್ಲಿರುವ ನೋವು ಮತ್ತು ಊತವನ್ನು ಕಡಿಮೆ ಮಾಡಬೇಕಾದರೆ ಉಪ್ಪಿನ ನೀರಿನಿಂದ ಬಾಯಿ ತೊಳೆದುಕೊಳ್ಳಿ.

ಬೇವು: ಒಸಡಿನ ಸಮಸ್ಯೆ ನಿವಾರಣೆ ಮಾಡಲು ಬೇವಿನ ಎಲೆಗಳನ್ನು ಜಗಿಯಬಹುದು. ಇದರಿಂದ ಹಲ್ಲು ಗುಳಿ ಬೀಳುವುದನ್ನು ತಡೆಯಬಹುದು ಮತ್ತು ಬಾಯಿಯ ಸಂಪೂರ್ಣ ಆರೋಗ್ಯ ಕಾಪಾಡಿಕೊಳ್ಳಬಹುದು. ಒಣಗಿಸಿ ಪುಡಿ ಮಾಡಿದ ಬೇವಿನ ಎಲೆಗಳನ್ನು ಅಡುಗೆ ಸೋಡಾ ಮತ್ತು ನೀರಿನೊಂದಿಗೆ ಹಾಕಿ ಮೌಥ್ ವಾಶ್ ಮಾಡಿಕೊಳ್ಳಬಹುದು. ಒಸಡಿನ ನೋವು ನಿವಾರಣೆ ಮಾಡಿಕೊಳ್ಳಲು ಇದನ್ನು ನಿಯಮಿತವಾಗಿ ಬಳಸಿಕೊಳ್ಳಿ.

ಫ್ರೆಶ್ ನ್ಯೂಸ್

Latest Posts

Featured Videos