ಕೊಬ್ಬು ಕರಗಲು ಏಲಕ್ಕಿ ತಿನ್ನಿ

ಕೊಬ್ಬು ಕರಗಲು ಏಲಕ್ಕಿ ತಿನ್ನಿ

ಬೆಂಗಳೂರು, ಮೇ. 10,ನ್ಯೂಸ್ ಎಕ್ಸ್ ಪ್ರೆಸ್: ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಮಸಾಲೆ ಪದಾರ್ಥ ಹಸಿರು ಏಲಕ್ಕಿ. ಸಿಹಿ ಆಹಾರ ಸೇರಿದಂತೆ ಪುಲಾವ್ ನಂತಹ ಮಸಾಲೆ ಅಡುಗೆಗೆ ಅಗತ್ಯವಾಗಿ ಏಲಕ್ಕಿ ಬಳಸುತ್ತಾರೆ. ಬಾಯಿ ರುಚಿ ಹೆಚ್ಚಿಸಲು ಕೂಡ ಅನೇಕರು ಏಲಕ್ಕಿ ಸೇವನೆ ಮಾಡುತ್ತಾರೆ. ಏಲಕ್ಕಿ ಆಹಾರದ ಜೊತೆ ಆರೋಗ್ಯಕ್ಕೂ ಒಳ್ಳೆಯದು.

ಏಲಕ್ಕಿ ಬೊಜ್ಜು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಪ್ರತಿ ದಿನ ಏಲಕ್ಕಿ ಸೇವನೆ ಮಾಡುವುದರಿಂದ ತೂಕ ಇಳಿಯುವ ಜೊತೆಗೆ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಏಲಕ್ಕಿಯಲ್ಲಿ ಕೊಬ್ಬಿನ ವಿರುದ್ಧ ಹೋರಾಡುವ ಗುಣವಿದೆ. ಹೊಟ್ಟೆ ಅಕ್ಕಪಕ್ಕ ಇರುವ ಬೊಜ್ಜು ಹೆಚ್ಚಾಗದಂತೆ ಇದು ತಡೆಯುತ್ತದೆ.

ಏಲಕ್ಕಿ ಹಸಿವನ್ನು ಕಡಿಮೆ ಮಾಡುವ ಗುಣವನ್ನೂ ಹೊಂದಿದೆ. ಇದರಿಂದ ನೀವು ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಹಸಿವೆಯಾಗದೆ ಇದ್ದರೆ ಅನೇಕರು ಆಹಾರ ಸೇವನೆ ಮಾಡುತ್ತಾರೆ. ಏಲಕ್ಕಿ ಸೇವನೆ ಮಾಡುತ್ತಿದ್ದರೆ ಈ ಹವ್ಯಾಸ ಕಡಿಮೆಯಾಗುತ್ತದೆ.

ಏಲಕ್ಕಿಯನ್ನು ಪುಡಿ ಮಾಡಿ ಅಥವಾ ಸಿಪ್ಪೆ ಸಮೇತ ನೀರಿನಲ್ಲಿ ಹಾಕಿ ಒಂದು ರಾತ್ರಿ ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.

ಟೀಗೆ ಏಲಕ್ಕಿ ಹುಡಿಯನ್ನು ಬಳಸಿ. ನೆನಪಿರಲಿ ಏಲಕ್ಕಿ ಟೀಗೆ ಸಕ್ಕರೆ ಹಾಕಬೇಡಿ.

ಸಮಯ ಸಿಕ್ಕಾಗ ಸಿಪ್ಪೆ ಸಮೇತ ಹಸಿರು ಏಲಕ್ಕಿಯನ್ನು ತಿನ್ನಿ. ಇದು ಜೀರ್ಣಕ್ರಿಯೆಯನ್ನು ಸರಳಗೊಳಿಸಿ, ದೇಹಕ್ಕೆ ಫೈಬರ್ ಒದಗಿಸುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos