ಮುಖದ ಮೇಲಿನ ಬೇಡವಾದ ಕೂದಲು ನಿವಾರಣೆ ಹೀಗೆ ಮಾಡಿ

ಮುಖದ ಮೇಲಿನ ಬೇಡವಾದ ಕೂದಲು ನಿವಾರಣೆ ಹೀಗೆ ಮಾಡಿ

ಬೆಂಗಳೂರು, ಮೇ, 7. ನ್ಯೂಸ್ ಎಕ್ಸ್ ಪ್ರೆಸ್: ಹುಡುಗಿಯರು ಮುಖ ಎಷ್ಟೇ ಚೆನ್ನಾಗಿದ್ದರೂ ಕೂದಲು ಬೆಳೆದಿದ್ದರೆ ಅದು ವಿರೂಪವಾಗಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಸಾಮಾನ್ಯವಾಗಿ ಹುಡುಗಿಯರಿಗೆ ತಲೆನೋವು ಉಂಟು ಮಾಡುತ್ತದೆ.

ಮೊಟ್ಟೆ : ಮುಖದ ಮೇಲಿನ ಬೇಡವಾದ ಕೂದಲು ನಿವಾರಣೆ ಮಾಡಲು ಮೊಟ್ಟೆ ಸಹಾಯ ಮಾಡುತ್ತದೆ. ಅದಕ್ಕಾಗಿ ಒಂದು ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಒಣಗಿದ ಮೇಲೆ ಉಗುರು ಬಿಸಿ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಕೂದಲು ನಿವಾರಣೆಯಾಗುತ್ತದೆ.

ಕಾರ್ನ್ ಫ್ಲೋರ್ : ಕಾರ್ನ್ ಫ್ಲೋರ್ ಹಲವಾರು ವಿಧಗಳಲ್ಲಿ ಸೌಂದರ್ಯ ಹೆಚ್ಚಲು ಸಹಾಯ ಮಾಡುತ್ತದೆ. ಮುಖದ ಮೇಲಿನ ಕೂದಲು ನಿವಾರಣೆ ಮಾಡಲು ಮೊಟ್ಟೆಯ ಜೊತೆ ಸಕ್ಕರೆ ಮತ್ತು ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನು ಮುಖಕ್ಕೆ ಹಚ್ಚಿ ಒಣಗಿದ ನಂತರ ತೆಗೆಯಿರಿ.

ಕಡ್ಲೆ ಹಿಟ್ಟು : ಕಡ್ಲೆ ಹಿಟ್ಟಿಗೆ ಸ್ವಲ್ಪ ಅರಿಶಿನ ಮತ್ತು ನೀರು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಇದರಿಂದ ಸುಲಭವಾಗಿ ಮುಖದ ಮೇಲಿನ ಕೂದಲು ನಿವಾರಣೆಯಾಗುತ್ತದೆ. ಮುಖಕ್ಕೆ ಹಚ್ಚಿ ಒಣಗಿದ ಮೇಲೆ ನಿಧಾನವಾಗಿ ತೆಗೆಯಿರಿ.

ಅರಿಶಿನ : ಬೇಡವಾದ ಕೂದಲಿನಿಂದ ಮುಕ್ತಿ ಪಡೆಯಲು ಅರಿಶಿನ ಬಳಕೆ ಮಾಡಿ. ಇದೊಂದು ಉತ್ತಮ ಆಂಟಿ ಸೆಪ್ಟಿಕ್ ಆಗಿದೆ. ಬೇಡವಾದ ಕೂದಲು ನಿವಾರಣೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos