ಸೌಂದರ್ಯಕ್ಕಾಗಿ ಐಸ್ ಕ್ಯೂಬ್ ಬಳಸಿ

ಸೌಂದರ್ಯಕ್ಕಾಗಿ ಐಸ್ ಕ್ಯೂಬ್ ಬಳಸಿ

ಬೆಂಗಳೂರು, ಮೇ. 4, ನ್ಯೂಸ್ ಎಕ್ಸ್ ಪ್ರೆಸ್: ಐಸ್ ಕ್ಯೂಬ್ ಹೆಚ್ಚಾಗಿ ಬೇಸಿಗೆಯಲ್ಲಿ ಸುಡುವ ಬಿಸಿಲನ್ನು ತಣಿಸಿ ತಂಪು ನೀಡುತ್ತದೆ. ಇದು ಬೇಸಿಗೆಯಲ್ಲಿ ತ್ವಚೆಯ ಅಂದವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಐಸ್ ಕ್ಯೂಬ್ ಸೌಂದರ್ಯದ ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ. ಐಸ್ ಕ್ಯೂಬ್ ಫೇಷಿಯಲ್ ಸ್ಪಾ ಮಾಡಲು ಸಹಾಯ ಮಾಡುತ್ತದೆ.

ಹೆಚ್ಚಾಗಿ ಥ್ರೆಡ್ಡಿಂಗ್ ಮಾಡಿಸಿದಾಗ ತ್ವಚೆಯಲ್ಲಿ ಉರಿ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಐಸ್ ಕ್ಯೂಬ್ ನ್ನು ಕರ್ಚೀಫ್ ನಲ್ಲಿ ಕಟ್ಟಿ ಮಸಾಜ್ ಮಾಡಿ. ಇದಲ್ಲದೆ ವ್ಯಾಕ್ಸಿಂಗ್ ಮಾಡಿಸಿದಾಗ ಸಹ ಉರಿ, ನೋವು ಕಾಣಿಸಿಕೊಳ್ಳುತ್ತದೆ. ಆ ಜಾಗಕ್ಕೂ ಐಸ್ ಮಸಾಜ್ ಮಾಡಿ. ನೋವು ನಿವಾರಣೆಯಾಗುತ್ತದೆ.

ತ್ವಚೆಯ ಮೇಲೆ ಕಲೆ, ರಾಷಸ್, ಶಿಲಿಂದ್ರ ಸಮಸ್ಯೆ ಕಾಣಿಸಿಕೊಂಡರೆ ಅದು ಮುಖದ ಮೇಲೆ ಹರಡಿದರೆ ಉರಿ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಐಸ್ ಕ್ಯೂಬ್ ಮಸಾಜ್ ಮಾಡಿದರೆ ಸಮಸ್ಯೆ ಮಾಯಾ.

ಪ್ರತಿದಿನ ಐಸ್ ಕ್ಯೂಬ್ ಮಸಾಜ್ ಮಾಡುತ್ತಿದ್ದರೆ ಮುಖದ ಫೋರ್ಸ್ ಮುಚ್ಚುತ್ತದೆ. ಜೊತೆಗೆ ಪಿಂಪಲ್ ಸಮಸ್ಯೆ ನಿವಾರಣೆಯಾಗುತ್ತದೆ.

ನೀವು ಯಾವುದೊ ಪಾರ್ಟಿಗೆ ಹೋಗುವಿರಾದರೆ ತುಂಬಾ ಅವಸರದಲ್ಲಿದ್ದರೆ ಮೇಕಪ್ ಮಾಡಲು ತಡವಾಗುತ್ತಿದ್ದರೆ ಸ್ವಚ್ಛ ಬಟ್ಟೆಯಲ್ಲಿ ಐಸ್ ಕ್ಯೂಬ್ ಹಾಕಿ ಅದರಿಂದ ಮುಖಕ್ಕೆ ಮಸಾಜ್ ಮಾಡಿ. ಇದರಿಂದ ಮುಖ ಹೊಳೆಯುತ್ತದೆ.

 

 

ಫ್ರೆಶ್ ನ್ಯೂಸ್

Latest Posts

Featured Videos