ರಾಸ್ಪ್ ಬೆರ್ರಿಯ ಆರೋಗ್ಯ ತಿಳಿಯಿರಿ

ರಾಸ್ಪ್ ಬೆರ್ರಿಯ ಆರೋಗ್ಯ ತಿಳಿಯಿರಿ

ಬೆಂಗಳುರು, ಮೇ. 4, ನ್ಯೂಸ್ ಎಕ್ಸ್ ಪ್ರೆಸ್: ಗುಲಾಬಿ ಬಣ್ಣದ ರಾಸ್ಪ್ ಬೆರ್ರಿ ಹಣ‍್ಣಿನಲ್ಲಿ ಪೌಷ್ಟಿಕಾಂಶ ಭರಿತವಾದದ್ದು. ವಿಟಮಿನ್, ಮಿನರಲ್ಸ್, ನಾರಿನಂಶ ಹಾಗೂ ಆಂಟಿ ಆ್ಯಕ್ಸಿಡೆಂಟ್ಸ್ ಈ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿದೆ. ಆರೋಗ್ಯ ಪ್ರಯೋಜನಗಳು ಈ ಹಣ್ಣಿನಲ್ಲಿ ಸಾಕಷ್ಟಿವೆ. ರಾಸ್ಪ್ ಬೆರ್ರಿ ಹಲವು ಆರೋಗ್ಯ ಸಮಸ್ಯೆಗಳಿಂದ ದೂರವಿಡುತ್ತದೆ.

ಈ ಹಣ್ಣು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. 1 ಕಪ್ ರಾಸ್ಪ್ ಬೆರ್ರಿಯಲ್ಲಿ 8 ಗ್ರಾಂ ಫೈಬರ್ ಇದೆ. ರಾಸ್ಪ್ ಬೆರ್ರಿ ಹಣ್ಣು ಹೃದಯ ಸಂಬಂಧಿತ ಕಾಯಿಲೆ ಹಾಗೂ ಕ್ಯಾನ್ಸರ್ ದೂರವಿಡಬಲ್ಲದ್ದು.

ಡಯಾಬಿಟಿಸ್ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಮಧುಮೇಹದಿಂದ ಅಧಿಕ ರಕ್ತದೊತ್ತಡ, ಸೇರಿದಂತೆ ಕಿಡ್ನಿ ಹಾನಿ, ಹೃದ್ರೋಗ, ನರಗಳಿಗೆ ಹಾನಿ, ಕಣ್ಣಿಗೆ ಹಾನಿಯಾಗುತ್ತದೆ. ರಾಸ್ಪ್ ಬೆರ್ರಿ ಸೇವಿಸಿದರೆ ಇಂಥ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಮುಖ್ಯವಾಗಿ ರಾಸ್ಪ್ ಬೆರ್ರಿ ಹಣ್ಣು ಡಯಾಬಿಟಿಸ್ ಅನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಆ್ಯಂಟಿ ಆಕ್ಯಿಡೆಂಟ್ಸ್ ಹೆಚ್ಚಾಗಿರುವುದರಿಂದ ಮಧುಮೇಹ ತಡೆಗಟ್ಟುತ್ತದೆ.

ಜೀರ್ಣಕ್ರಿಯೆ ಕಾಪಾಡುವಲ್ಲಿ ರಾಸ್ಪ್ ಬೆರ್ರಿ ಪ್ರಮುಖ ಪಾತ್ರ ವಹಿಸುತ್ತದೆ. ಜೀರ್ಣ ಕ್ರಿಯೆಗೆ ಸಂಬಂಧಿತ ಅನೇಕ ರೀತಿಯ ತೊಂದರೆ ಗುಣಪಡಿಸಲು, ದೇಹದ ರಕ್ಷಣಾ ವ್ಯವಸ್ಥೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ತಡೆಯಲು ಇದನ್ನು ಉಪಯೋಗಿಸಲಾಗುತ್ತದೆ.

ತೂಕ ನಷ್ಟಕ್ಕೂ ರಾಸ್ಪ್ ಬೆರ್ರಿ ಸಹಾಯಕಾರಿಯಾಗಬಲ್ಲದ್ದು. ಆರೋಗ್ಯವನ್ನು ಸುಸ್ಥಿತಿಯಲ್ಲಿಡುವಂತೆ ನೋಡಿಕೊಳ್ಳುತ್ತದೆ. ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ಈ ಹಣ್ಣನ್ನು ಪ್ರತಿ ನಿತ್ಯ  ಸೇವಿಸಿದರೆ ತೂಕ ನಷ್ಟವಾಗುತ್ತದೆ.

ರಾಸ್ಪ್ ಬೆರ್ರಿಯಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಎ ಹೆಚ್ಚಾಗಿದ್ದು, ಇದು ಕಣ್ಣಿನ ಆರೋಗ್ಯಕ್ಕೆ ಉತ್ತಮ. ಅಲ್ದೇ ಕಣ್ಣಿನ ಪೊರೆಯನ್ನು ರಕ್ಷಿಸುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos