ಶುಂಠಿಯಲ್ಲಿ ಅಡಗಿದೆ ಆರೋಗ್ಯ

ಶುಂಠಿಯಲ್ಲಿ ಅಡಗಿದೆ ಆರೋಗ್ಯ

ಬೆಂಗಳೂರು, ಮೇ.3, ನ್ಯೂಸ್ ಎಕ್ಸ್ ಪ್ರೆಸ್: ಅಡುಗೆಯ ರುಚಿಯನ್ನ ಹೆಚ್ಚಿಸುವ ಶುಂಠಿ ಉತ್ತಮ ಆರೋಗ್ಯಕ್ಕೂ ಒಳ್ಳೆಯದು.

ಶುಂಠಿಯಲ್ಲಿರುವ ಜಿಂಜೆರೋಲ್ ಗಳು ನೋವು ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಜೊತೆಗೆ ಇವು ಜೀರ್ಣಶಕ್ತಿಯನ್ನು ಹೆಚ್ಚಿಸುವ ವಿಶೇಷ ಗುಣವನ್ನು ಸಹ ಹೊಂದಿವೆ.

ಶುಂಠಿಯು ಕೆಲ ಬಗೆಯ ಅತಿಸಾರಕ್ಕೆ ಪರಿಣಾಮಕಾರಿ ಔಷಧಿಯೆಂದು ಕಂಡುಕೊಳ್ಳಲಾಗಿದೆ. ಆಗಾಗ ಕಂಡು ಬರುವ ಶೀತ, ಜ್ವರ ಹೋಗಲಾಡಿಸುವ ಶಕ್ತಿ ಇದಕ್ಕಿದೆ. ಜೇನುತುಪ್ಪ, ತುಳಸಿ ರಸವನ್ನು ಶುಂಠಿರಸದೊಂದಿಗೆ ರುಚಿಗೆ ಬೆರೆಸಿ ಕುಡಿದರೆ, ಕಫ ನಿವಾರಣೆಯಾಗುತ್ತದೆ.

ಬೆಳಗ್ಗೆ ಎದ್ದ ತಕ್ಷಣ ವಾಂತಿ ಆಗುವುದನ್ನು ಇದು ತಡೆಯುತ್ತದೆ. ಶುಂಠಿಯನ್ನು ಜಗಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿ ಪದೇ ಪದೇ ನೆಗಡಿ, ಶೀತ ಉಂಟಾಗುವುದು ಕಡಿಮೆಯಾಗುತ್ತದೆ.

ಸ್ನಾಯುಗಳ ನೋವನ್ನು ಕಡಿಮೆಗೊಳಿಸುವ ಶಕ್ತಿ ಇದಕ್ಕಿದೆ. ಶುಂಠಿಯ ರಸದ ಜತೆ ಚಕ್ಕೆಪುಡಿ, ಸಾಸಿವೆ ಎಣ್ಣೆ ಜತೆ ಬೆರೆಸಿ ಹಚ್ಚಿಕೊಂಡರೆ ಮೊಣಕಾಲು ನೋವು ಕಡಿಮೆಯಾಗುತ್ತದೆ. ಶುಂಠಿ ಪುಡಿಯು ಮುಟ್ಟಿನಿಂದ ಬರುವ ಹೊಟ್ಟೆ ನೋವನ್ನು ಪರಿಹರಿಸುತ್ತದೆ. ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಇದು ಮಧುಮೇಹವನ್ನು ನಿಯಂತ್ರಣದಲ್ಲಿರಿಸುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos