ಮಾವಿನ ಹಣ್ಣಿನ ಉಪಯೋಗ ತಿಳಿಯಿರಿ

ಮಾವಿನ ಹಣ್ಣಿನ ಉಪಯೋಗ ತಿಳಿಯಿರಿ

ಬೆಂಗಳೂರು, ಮೇ.3, ನ್ಯೂಸ್ ಎಕ್ಸ್ ಪ್ರೆಸ್:  ಮಾವಿನ ಹಣ್ಣಿನ ಸುವಾಸನೆ, ಬಣ್ಣ ಹಾಗೂ ರುಚಿಗೆ ಮಾರುಹೋಗದವರೇ ಇಲ್ಲ. ಮಕ್ಕಳಿಂದ ವಯಸ್ಕರವರೆಗೂ ಎಲ್ಲರೂ ಬಹಳ ಇಷ್ಟಪಡುವ ಮಾವಿನ ಹಣ್ಣಿನಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ.  ಇದರಲ್ಲಿ ವಿಟಮಿನ್ಸಿ ಹೇರಳವಾಗಿದೆ. ನಾರಿನಂಶ (ಫೈಬರ್) ಹೆಚ್ಚಾಗಿದೆ. ನೀರಿನಂಶ ಕೂಡಾ ಇದೆ. ಅನೇಕ ಖನಿಜಾಂಶಗಳಿವೆ. ಉತ್ತಮ ಜೀರ್ಣಕಾರಕವೂ ಹೌದು.

ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿರುತ್ತದೆ. ಇದನ್ನು ತಿನ್ನುವುದರಿಂದ ಕ್ಯಾನ್ಸರ್ ನಂತಹ ರೋಗಗಳನ್ನು ತಡೆಗಟ್ಟಬಹುದು.  ಮಾವಿನಲ್ಲಿ ಸಾಮಾನ್ಯವಾಗಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಚರ್ಮದ ಸಮಸ್ಯೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ.

ಫೈಬರ್ ಮತ್ತು ಸಿ ವಿಟಮಿನ್ ಮಾವಿನಲ್ಲಿ ಅಧಿಕ ಪ್ರಮಾಣದಲ್ಲಿದ್ದು, ಇದರ ಸೇವನೆಯಿಂದ ಹೊಟ್ಟೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.  ಈ ಹಣ್ಣುಗಳಲ್ಲಿ ಕಂಡುಬರುವ ಗ್ಲುಟಮಿನ್ ಅಂಶವು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗರ್ಭಿಣಿಯರು ಸಹ ಮಾವಿನ ಹಣ್ಣನ್ನು ತಿನ್ನಬಹುದೆಂದು ವೈದ್ಯರು ಸಲಹೆ ನೀಡುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos