ಉತ್ತಮ ಆರೋಗ್ಯಕ್ಕೆ ಮೋಸಂಬಿ ತಿನ್ನಿ

ಉತ್ತಮ ಆರೋಗ್ಯಕ್ಕೆ ಮೋಸಂಬಿ ತಿನ್ನಿ

ಬೆಂಗಹಳೂರು, ಮೇ.3, ನ್ಯೂಸ್ ಎಕ್ಸ್ ಪ್ರೆಸ್: ಮೋಸಂಬಿಯಲ್ಲಿ ವಿಟಮಿನ್ ಸಿ ಹೇರಳವಾಗಿರೋದರಿಂದ ನಮ್ಮ ನಿತ್ಯದ ಡಯಟ್ ಗೆ ಹೇಳಿ ಮಾಡಿಸಿದಂತಿದೆ. ಒತ್ತಡ ಮತ್ತು ಮಾಲಿನ್ಯದಿಂದ ನಿಮ್ಮ ದೇಹದಲ್ಲಿ ಅಪಾಯಕಾರಿ ಟಾಕ್ಸಿನ್ ಗಳು ಸೇರಿಕೊಂಡಿರುತ್ತವೆ. ಅವನ್ನೆಲ್ಲ ಹೊರಹಾಕುವಲ್ಲಿ ಮೋಸಂಬಿ ಜ್ಯೂಸ್ ಸಹಕಾರಿ.

ಮೋಸಂಬಿಯಲ್ಲಿ ಸೋಂಕು ಪ್ರತಿರೋಧಕ ಅಂಶಗಳಿರೋದರಿಂದ ನಿಮ್ಮ ಇಮ್ಯುನಿಟಿ ವ್ಯವಸ್ಥೆ ಸುಧಾರಿಸುತ್ತೆ. ಅಜೀರ್ಣದ ತೊಂದರೆಯಿದ್ದವರು ಮೋಸಂಬಿ ಹಣ್ಣಿನ ಜ್ಯೂಸ್ ಕುಡಿಯೋದು ಉತ್ತಮ. ಎಷ್ಟೋ ಬಾರಿ ಅಜೀರ್ಣದಿಂದ್ಲೂ ನಿಮ್ಮ ಮುಖದ ಮೇಲೆ ಮೊಡವೆಗಳೇಳುತ್ತವೆ. ಮೋಸಂಬಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಅದು ಸುಧಾರಿಸುತ್ತದೆ. ಮೋಸಂಬಿಯಲ್ಲಿ ವಿಟಮಿನ್ಸ್ ಹಾಗೂ ಮಿನರಲ್ಸ್ ಹೇರಳವಾಗಿದೆ. ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ. ಮುಖದ ಮೇಲಿನ ಕಲೆಗಳ ನಿವಾರಣೆಗೆ ಮೋಸಂಬಿ ಬೆಸ್ಟ್.

ಮೋಸಂಬಿ ರಸವನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ತೊಳೆದರೆ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ. ದಿನನಿತ್ಯ ನೀವು ಮೋಸಂಬಿ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ಚರ್ಮ ಬೇಗ ಸುಕ್ಕಾಗುವುದಿಲ್ಲ. ನಿಮ್ಮ ಮುಖದ ಮೇಲಿನ ಗುಳ್ಳೆಗಳು, ಮೊಡವೆ ಎಲ್ಲವೂ ನಿವಾರಣೆಯಾಗುತ್ತವೆ.

 

ಫ್ರೆಶ್ ನ್ಯೂಸ್

Latest Posts

Featured Videos