ಆರೋಗ್ಯ ವೃದ್ಧಿಸುವ ಕರಿಬೇವು

ಆರೋಗ್ಯ ವೃದ್ಧಿಸುವ ಕರಿಬೇವು

ಬೆಂಗಳೂರು, ಮೇ. 2, ನ್ಯೂಸ್ ಎಕ್ಸ್ ಪ್ರೆಸ್: ಒಗ್ಗರಣೆಗೆ ಬಳಸುವ ಕರಿಬೇವು ಅಡುಗೆಯ ಘಮ ಹೆಚ್ಚಿಸುವುದಲ್ಲದೇ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಕರಿಬೇವಿನಲ್ಲಿರುವ ಅಗಾಧ ಔಷಧಿಯ ಗುಣ ಹೆಚ್ಚಿನವರಿಗೆ ತಿಳಿದಿಲ್ಲ. ಸಂಸ್ಕೃತದಲ್ಲಿ ಕಾಲಾಶಕ ಎಂದು ಕರೆಯಲ್ಪಡುವ ಕರಿಬೇವಿಗೆ ಅದರದೇ ಆದ ಸುವಾಸನೆಯಿದೆ. ಹಲವು ಕಾಯಿಲೆಗಳನ್ನು ಹೋಗಲಾಡಿಸುವ ಶಕ್ತಿ ಇದಕ್ಕಿದೆ. ಜೀರ್ಣಕ್ರಿಯೆ ಯನ್ನು ಸುಧಾರಿಸುವ ಕರಿಬೇವು ದೇಹದಲ್ಲಿ ಇರುವ ಟಾಕ್ಸಿಕ್ ಅಂಶಗಳನ್ನು ಹೊರಗೆ ಹಾಕುತ್ತದೆ. ಕಫ, ಪಿತ್ತ, ಹೊಟ್ಟೆಗೆ ಸಂಬಂಧ ಪಟ್ಟ ಖಾಯಿಲೆಗಳು, ಮಧುಮೇಹ, ರಕ್ತದೊತ್ತಡ, ಮಲಬದ್ಧತೆ, ಬೇಧಿ ಹೀಗೆ ಹಲವು ಖಾಯಿಲೆಗಳಿಗೆ ರಾಮಬಾಣ ಈ ಕರಿಬೇವು.

ಧುಮೇಹಿಗಳು ಪ್ರತಿದಿನ ಕರಿಬೇವು ಸೇವಿಸಿದರೆ ಸಾಕು, ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು. ಬೆಳಗ್ಗೆ ಎದ್ದ ತಕ್ಷಣ ಕಾಡುವ ವಾಕರಿಕೆ ಸಮಸ್ಯೆ, ಹೊಟ್ಟೆ ತೊಳೆಸುವುದಕ್ಕೆ ಇದು ಒಳ್ಳೆಯ ಮದ್ದು. ರಕ್ತಹೀನತೆಯನ್ನು ನಿವಾರಿಸುವ ಇದು ಎಸಿಡಿಟಿಗೆ ಉತ್ತಮ ಔಷಧಿ. ಎಸಿಡಿಟಿ ಯಿಂದ ಹೊಟ್ಟೆ ಮತ್ತು ಎದೆಯ ಭಾಗಗಳಲ್ಲಿ ಕಾಣಿಸಿಕೊಳ್ಳುವ ಉರಿಗೆ ಕರಿಬೇವಿನಿಂದ ತಯಾರಿಸಿದ ಜ್ಯೂಸ್ ಕುಡಿಯಬೇಕು. ಆರ್ಯುವೇದ ಔಷಧಿಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕರಿಬೇವಿಗೆ ವಿಷವನ್ನು ಹೊರಹಾಕುವ ಸಾಮರ್ಥ್ಯವಿದೆ. ವಿಷ ಜಂತುಗಳು ಕಚ್ಚಿದರೆ ಕರಿಬೇವಿನಿಂದ ತಯಾರಿಸಿದ ಪೇಸ್ಟ್ ಹಚ್ಚುತ್ತಾರೆ. ಇನ್ನು ಪ್ರತಿದಿನ ಕರಿಬೇವಿನ ಎಲ್ಲೆಯನ್ನು ಸೇವಿಸುವುದರಿಂದ ಬೊಜ್ಜನ್ನು ಕರಗಿಸಬಹುದು ಮಾತ್ರವಲ್ಲದೇ ಇದರಿಂದ ದೇಹದ ತೂಕ ಕಡಿಮೆಯಾಗುವುದು.

ಫ್ರೆಶ್ ನ್ಯೂಸ್

Latest Posts

Featured Videos