ನೇರಳೆ ಹಣ್ಣುನಲ್ಲಿದೆ ಆರೋಗ್ಯ

ನೇರಳೆ ಹಣ್ಣುನಲ್ಲಿದೆ ಆರೋಗ್ಯ

ಬೆಂಗಳೂರು, ಮೇ. 2, ನ್ಯೂಸ್ ಎಕ್ಸ್ ಪ್ರೆಸ್: ವರುಷಕ್ಕೊಮ್ಮೆ ಕಾಣಸಿಗುವ ಈ ನೇರಳೆ ಹಣ್ಣು ಎಲ್ಲರಿಗೂ ಪ್ರಿಯ. ರೋಗ ಶಮನ ಮಾಡುವಲ್ಲಿ ಪ್ರಮುಖ ಔಷಧಿಯಾಗಿ ಕಾರ್ಯನಿರ್ವಹಿಸುವ ಈ ನೇರಳೆ ಹಣ್ಣು ಇತ್ತೀಚಿನ ದಿನಗಳಲ್ಲಿ ಕಾಣಸಿಗುವುದೇ ಅಪರೂಪ.

ಕಬ್ಬಿಣ, ಪೊಟಾಶಿಯಂ, ಮೇಗ್ನೇಶಿಯಂ, ಪ್ರೋಸ್ಫರಸ್, ವಿಟಮಿನ್ ಸಿ ಅಂಶಗಳನ್ನು ಹೊಂದಿದ ನೇರಳೆ ಹಣ್ಣು ಬರೀ ಆರೋಗ್ಯಕಾರಕ ಮಾತ್ರವಲ್ಲ, ಸೌಂದರ್ಯವರ್ಧಕವೂ ಹೌದು. ತಿನ್ನಲು ರುಚಿರುಚಿಯಾದ ಈ ಹಣ್ಣು ಹಲವು ರೋಗಗಳಿಗೆ ರಾಮಬಾಣ.

ರಕ್ತಹೀನತೆ, ಕಾಮಾಲೆ ರೋಗ, ಹೃದಯ ಸಂಬಂಧ ಕಾಯಿಲೆ, ಹೊಟ್ಟೆ ಹುಣ್ಣು, ಬೇಧಿ, ಆಯಸಿಡಿಟಿಯಂಥ ಹತ್ತು ಹಲವು ಕಾಯಿಲೆಗಳನ್ನು ಹೋಗಲಾಡಿಸುವ ಶಕ್ತಿ ಈ ನೇರಳೆ ಹಣ್ಣಿೀಗಿದೆ. ಅಷ್ಟೇ ಅಲ್ಲದೇ ಹದಿಹರೆಯದ ಯುವಕ ಯುವತಿಯರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡುವ ಮೊಡವೆಯನ್ನು ಹೋಗಲಾಡಿಸಿ ತ್ವಚೆಯ ಅಂದ ಹೆಚ್ಚಿಸುವ ಶಕ್ತಿ ಇದಕ್ಕಿದೆ.

ಆಯಂಟಿ ಬ್ಯಾಕ್ಟೀರಿಯಾ ಅಂಶ ಹೊಂದಿದ ಈ ನೇರಳೆ ಹಣ್ಣಿನ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ ತಡೆಗಟ್ಟಬಹುದು. ಜಾಂಬೋಲಿನ್ ಎಂಬ ಗ್ಲೂಕೋಸ್ ಅಂಶ ಇದರಲ್ಲಿರುವ ಕಾರಣ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಡಯಾಬಿಟಿಸ್ ಇರುವವರು ಕೂಡ ಯಾವುದೇ ಆತಂಕವಿಲ್ಲದೆ ಈ ಹಣ್ಣನ್ನು ತಿನ್ನಬಹುದು. ನೇರಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಜೀರ್ಣ ಕ್ರಿಯೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುವ ಇದು ರಕ್ತ ಶುದ್ಧಿ ಮಾಡುವಲ್ಲಿ ಸಹಕಾರಿಯಾಗಿದೆ. ಇನ್ನು ಆಯಿಲ್ ಸ್ಕೀನ್ ನಿಂದ ಕಂಗಲಾಗಿರುವವರಿಗೆ ಇದು ಹೇಳಿ ಮಾಡಿಸಿದ ಮದ್ದು.

ಫ್ರೆಶ್ ನ್ಯೂಸ್

Latest Posts

Featured Videos