ಅನಾನಸ್ ಹಣ್ಣು ಆರೋಗ್ಯಕ್ಕೆ ಉತ್ತಮ

ಅನಾನಸ್ ಹಣ್ಣು ಆರೋಗ್ಯಕ್ಕೆ ಉತ್ತಮ

ಬೆಂಗಳೂರು, ಏ. 30, ನ್ಯೂಸ್ ಎಕ್ಸ್ ಪ್ರೆಸ್: ರಾತ್ರಿ ಊಟವಾದ ನಂತರ ಹಣ್ಣುಗಳನ್ನು ತಿಂದು ಮಲಗುವವರು ಕೆಲವರಾದರೆ, ಇನ್ನು ಕೆಲವರು ರಾತ್ರಿಯ ಊಟವನ್ನು ಬಿಟ್ಟು ಬರೀ ಹಣ್ಣುಗಳನ್ನು ತಿಂದು ಮಲಗುವವರು ಇರುತ್ತಾರೆ. ಪೇಟೆಯಿಂದ ತಂದ ಬೇಕರಿ ತಿಂಡಿಗಳನ್ನು ತಿನ್ನುವ ಬದಲು ಆರೋಗ್ಯ ವರ್ಧಕ ತಾಜಾ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು.

ಪ್ರತಿದಿನ ಅನಾನಸ್ ಹಣ್ಣುಗಳನ್ನು ತಿನ್ನುವುದರಿಂದ ಹೃದಯದ ದುರ್ಬಲತೆ ದೂರವಾಗುತ್ತದೆ. ಹೆಚ್ಚಾಗಿ ಕಂಡು ಬರುವ ಅರ್ಜಿಣಕ್ಕೆ ಇದು ಉತ್ತಮ ಮದ್ದು. ಊಟದ ನಂತರ ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಅಜೀರ್ಣ ತಡೆಗಟ್ಟಬಹುದು.

ಅನಾನಸ್ ಗೆ ಕರಿಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಆಯಸಿಡಿಟಿ ಗೂ ಇದು ಉತ್ತನ ಮನೆ ಮದ್ದು. ಜೊತೆಗೆ ಇದರಿಂದ ಕೆಮ್ಮು, ಕಫ ಕೂಡ ಕಡಿಮೆಯಾಗುತ್ತದೆ.

ಮೂತ್ರ ಕಟ್ಟುವುದು, ಪಿತ್ತಕೋಶ ಊದಿಕೊಳ್ಳುವುದು, ಕಣ್ಣಿನ ಸುತ್ತಮುತ್ತ ಊದಿಕೊಳ್ಳುವುದು ಮುಂತಾದ ತೊಂದರೆಗಳಿಗೆ ತಾಜಾ ಅನಾನಸ್ ಹಣ್ಣನ್ನು ತಿಂದು ಹಾಲು ಕುಡಿಯಬೇಕು. ಇನ್ನು ಬೇರೆ ಏನನ್ನೂ ಸೇವಿಸಬಾರದು. ಹೀಗೆ ಮಾಡುವುದರಿಂದ ಒಂದು ವಾರದಲ್ಲಿ ಗುಣವಾಗುತ್ತದೆ. ಕಜ್ಜಿ, ತುರಿಕೆ ಗಳಿದ್ದರೆ ಅನಾನಸ್ ನ ರಸವನ್ನು ಹಚ್ಚಿದರೆ ಸಾಕು, ಕ್ಷಣಾರ್ಧದಲ್ಲಿ ತುರಿಕೆ ಮಾಯ.

ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದೊಡನೆ ಸೇರಿಸಿ ತಿನ್ನುವುದರಿಂದ ಜಾಂಡೀಸ್ ಗುಣವಾಗುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos