ಉತ್ತಮ ಆರೋಗ್ಯಕ್ಕೆ ಟೊಮ್ಯಾಟೊ ಬಳಸಿ

ಉತ್ತಮ ಆರೋಗ್ಯಕ್ಕೆ ಟೊಮ್ಯಾಟೊ ಬಳಸಿ

ಬೆಂಗಳೂರು, ಏ. 29, ನ್ಯೂಸ್ ಎಕ್ಸ್ ಪ್ರೆಸ್:  ಬೇಸಿಗೆಯಲ್ಲಿ ಮುಖ, ಚರ್ಮ ಕೆಂಪಾಗುವುದು ನಮಗೆಲ್ಲ ಗೊತ್ತಿದೆ. ಆ ಕೆಂಪು ಚರ್ಮಕ್ಕೆ, ಆರೋಗ್ಯಕ್ಕೆ ಹಿತ ನೀಡುವ ಕೆಂಪು ತರಕಾರಿ, ಹಣ್ಣುಗಳು ಬಿಸಿಯ ಕೆಂಪನ್ನು ತಂಪು ಮಾಡಬಲ್ಲವು. ಪ್ರಖರ ಕಿರಣಗಳಿಗೆ ಕೆಂಪು ಗುಳ್ಳೆಗಳು, ಕಪ್ಪು ಕಲೆಗಳು, ತುರಿಕೆ ಕಾಣಿಸಿಕೊಳ್ಳುವುದು ಸಾಮಾನ್ಯ. ಅಂತಹ ಸಮಯದಲ್ಲಿ ಚರ್ಮದ ರಕ್ಷಣೆ ಹಾಗೂ ಆರೋಗ್ಯದ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವೇನಲ್ಲ.

ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಎ ಯನ್ನು ಇದು ಹೊಂದಿರುವುದರಿಂದ ಚರ್ಮದ ಆರೋಗ್ಯ ರಕ್ಷಣೆಗೆ ಇದು ಹೆಚ್ಚು ಪೂರಕವಾಗಿದೆ. ದೇಹದ ಕೋಶಗಳಿಗೆ ಆಗಬಹುದಾದಂತಹ ಹಾನಿಯನ್ನು ಕಡಿಮೆ ಮಾಡುವುದಲ್ಲದೆ ಆಕ್ಸಿಡೇಟಿವ್ ಸ್ಟ್ರೆಸ್ ಉಂಟಾಗದಂತೆ ತಡೆಯಬಲ್ಲುದು. ಟೊಮ್ಯಾಟೊದಲ್ಲಿರುವಂತಹ ಲೈಕೋಪಿನ್ ಎನ್ನುವಂತಹ ಫೈಟೋ ಕೆಮಿಕಲ್ ಬಹಳ ಪರಿಣಾಮಕಾರಿಯಾಗಿದ್ದು, ಆಂಟಿ ಆಕ್ಸಿಡೆಂಟ್ ಗುಣಗಳನ್ನು ಸೂಸುತ್ತದೆ. ಇದು ಪ್ರಾಸ್ಟೇಟ್ ಕ್ಯಾನ್ಸರ್ ಬರುವಂತಹ ಸಂಭವವನ್ನು ಕಡಿಮೆ ಮಾಡಬಲ್ಲುದು. ಅನೇಕ ಸಂಶೋಧನೆಗಳು ಸಹ ಇದನ್ನು ಪುಷ್ಟೀಕರಿಸುತ್ತದೆ.

ಕೆಂಪು ಟೊಮ್ಯಾಟೊವನ್ನು ಆಹಾರಪದಾರ್ಥಗಳ ತಯಾರಿಕೆಯಲ್ಲಿ ಬಳಸುವುದು ಮಾತ್ರವಲ್ಲ; ಹಾಗೆಯೇ ಹಸಿಯಾಗಿ ಕೂಡ ತಿನ್ನಬಹುದು. ಹೊರಗಡೆ ಸುತ್ತಾಡಲು ಹೋದರೆ ಸುಸ್ತಾಗಿ ಹೋಗುವವರನ್ನು ಕಾಣುತ್ತೇವೆ. ಅಂತಹ ಸಮಯದಲ್ಲಿ ಸಹಾಯ ಮಾಡಬಲ್ಲಂತಹ ಪದಾರ್ಥ ಟೊಮ್ಯಾಟೊ.

ಪೊಟ್ಯಾಷಿಯಂ ಹಾಗೂ ನಾರಿನಂಶದಿಂದ ತುಂಬಿರುವಂತಹ ಟೊಮ್ಯಾಟೊವು ಹೆಚ್ಚಿನ ಪ್ರಮಾಣದಲ್ಲಿ ನೀರಿನಂಶವನ್ನು ಕೂಡ ಹೊಂದಿದೆ. ಆದ್ದರಿಂದ ದೇಹವನ್ನು ನಿರ್ಜಲೀಕರಣದಿಂದ ಕಾಪಾಡಲು ಸಹಕಾರಿಯಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಸುಲಭವಾಗಿ ಬೆಳೆಯಬಹುದಾದ ಟೊಮ್ಯಾಟೊವನ್ನು ಬೆಳೆದು ಸೇವಿಸಿ ಆರೋಗ್ಯವನ್ನು ನಿರ್ವಹಿಸಿಕೊಳ್ಳಬಹುದು.

ಫ್ರೆಶ್ ನ್ಯೂಸ್

Latest Posts

Featured Videos