ಆರೋಗ್ಯ ವೃದ್ಧಿಸುವ ಸಪೋಟ ಹಣ್ಣು

ಆರೋಗ್ಯ ವೃದ್ಧಿಸುವ ಸಪೋಟ ಹಣ್ಣು

ಬೆಂಗಳೂರುಏ, 26, ನ್ಯೂಸ್ ಎಕ್ಸ್ ಪ್ರೆಸ್: ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡಿ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕರಿಸುವ ಹಣ್ಣುಗಳ ಪೈಕಿ ಸಪೋಟವೂ ಒಂದು. ಚಿಕ್ಕು, ಸ್ಪಾಡಿಲ್ಲಾ ಫ್ರೂಟ್, ನೋಸ್ ಬೆರ್ರಿ, ಸಪೋಡಿಲ್ಲಾ ಪ್ಲಮ್, ಎಂದು ಕರೆಯಲ್ಪಡುವ ಕಂದು ಬಣ್ಣದ ಈ ಹಣ್ಣು ಸಪೋಟೇಸೀ ಸಸ್ಯವರ್ಗಕ್ಕೆ ಸೇರಿದೆ.  ದೇಹಕ್ಕೆ ಅಗತ್ಯವಿರುವಂತಹ ವಿಟಮಿನ್, ನಾರಿನಾಂಶ, ಪೋಷಕಾಂಶ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಅಂಶಗಳು ಸಪೋಟದಿಂದ ದೊರೆಯುತ್ತದೆ. ಇದರಲ್ಲಿನ ರುಚಿಯಾದ ತಿರುಳು ಸುಲಭವಾಗಿ ಜೀರ್ಣವಾಗುವುದು ಮಾತ್ರವಲ್ಲದೇ ಸಪೋಟದಲ್ಲಿರುವ ಅಧಿಕ ಪ್ರಮಾಣದ ಗ್ಲುಕೋಸ್ ಅಂಶ ದೇಹಕ್ಕೆ ಚೈತನ್ಯ ನೀಡುತ್ತದೆ.

ವಿಟಮಿನ್ ಎ ಇದರಲ್ಲಿ ಅಧಿಕವಾಗಿದ್ದು, ದೃಷ್ಟಿ ದೋಷಕ್ಕೆ ಇದು ರಾಮಬಾಣ. ಕಣ್ಣುಗಳಿಗೆ ಅಗತ್ಯವಿರುವಂತಹ ಪೋಷಕಾಂಶಗಳು ಇದರಲ್ಲಿರುವುದರಿಂದ ಕಣ್ಣುಗಳ ಆರೋಗ್ಯಕ್ಕೂ ಇದು ಉತ್ತಮವಾಗಿದೆ.

ಚಿಕ್ಕುವಿನಲ್ಲಿರುವ ಕ್ಯಾಲ್ಸಿಯಂ, ಗಂಧಕ, ಕಬ್ಬಿಣ ಮುಂತಾದ ಖನಿಜಾಂಶಗಳು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಮೂತ್ರಪಿಂಡದಲ್ಲಿ ಕಲ್ಲುಗಳಾಗಿದ್ದರೆ ಸಪೋಟ ಹಣ್ಣಿನ ಬೀಜಗಳನ್ನು ಪುಡಿ ಮಾಡಿ ಒಂದು ಲೋಟ ನೀರಿನೊಂದಿಗೆ ಬೆರೆಸಿ ಕುಡಿದರೆ ಆಯಿತು. ಪ್ರತಿದಿನ ಇದರ ಸೇವನೆಯಿಂದ ಮೂತ್ರ ಹೆಚ್ಚಾಗುವುದು ಹಾಗೂ ಕಲ್ಲು ಕರಗಿ ವಿಸರ್ಜಿಸಲು ನೆರವಾಗುತ್ತದೆ. ಇದು ದೊಡ್ಡ ಕರುಳಿನ ಒಳಚರ್ಮವನ್ನು ಕಾಪಾಡುತ್ತದೆ. ಸೋಂಕುಗಳು ಬಾರದಂತೆ ತಡೆಯುವ ಶಕ್ತಿ ಇದಕ್ಕಿದೆ.

ಫ್ರೆಶ್ ನ್ಯೂಸ್

Latest Posts

Featured Videos