ಕಡಲೇಕಾಯಿಯ ಸೇವನೆ ಆರೋಗ್ಯ ಉತ್ತಮ

ಕಡಲೇಕಾಯಿಯ ಸೇವನೆ ಆರೋಗ್ಯ ಉತ್ತಮ

ಬೆಂಗಳೂರು, . 25, ನ್ಯೂಸ್ ಎಕ್ಸ್ ಪ್ರೆಸ್: ದ್ವಿದಳ ಧಾನ್ಯವಾಗಿರುವ ಕಡಲೆಕಾಯಿಯಲ್ಲಿ ಅಗಾಧ ಪ್ರಮಾಣದ ಪ್ರೋಟಿನ್ ಗಳಿವೆ.  ಇದರಲ್ಲಿರುವ ಆಕ್ಸಿಡೆಂಟ್ ಗಳು ಮತ್ತು ಖನಿಜಗಳಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು. ಜೊತೆಗೆ ಒಂದು ಹಿಡಿ ಕಡಲೇ ಬೀಜವನ್ನು ಸೇವಿಸುವುದರ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇದರಲ್ಲಿರುವ ಸತುವಿನ ಪ್ರಮಾಣವು ಮೆದುಳಿನ ಕಾರ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿ. ಇದರಿಂದಾಗಿ ಸ್ಮರಣಶಕ್ತಿಯು ಉತ್ತಮಗೊಳ್ಳುತ್ತದೆ. ಖಿನ್ನತೆಯಿಂದ ಹೊರಬರಲು ನೆರವಾಗುವ ಕಡಲೇ ಕಾಯಿಯು ಪಿತ್ತಕೋಶದ ಕಾಯಿಲೆಯಿಂದ ದೇಹವನ್ನು ಕಾಪಾಡುತ್ತದೆ. ಜೊತೆಗೆ ಪಿತ್ತಕೋಶದಲ್ಲಿ ಕಂಡುಬರುವ ಕಲ್ಲಿನ ಸಮಸ್ಯೆಗೆ ಇದು ಉತ್ತಮ ಮದ್ದು.

ಇತ್ತೀಚಿನ ದಿನಗಳಲ್ಲಿ ಪಿತ್ತಕೋಶದ ಕಲ್ಲುಗಳ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಜಾಸ್ತಿಯಾಗಿದೆ. ಅದರ ಅರಿವಾಗುವುದು ಅದು ಉಲ್ಬಣಗೊಂಡ ನಂತರ ಮಾತ್ರ. ಶೇಂಗಾ ಬೀಜ ಅರ್ಥಾತ್ ಕಡಲೇಕಾಯಿಯ ಸೇವನೆಯಿಂದ ಪಿತ್ತಕೋಶದಲ್ಲಿ ಕಲ್ಲುಗಳಾಗುವುದನ್ನು ತಪ್ಪಿಸಬಹುದು.

 

ಫ್ರೆಶ್ ನ್ಯೂಸ್

Latest Posts

Featured Videos