ನೆಲ್ಲಿಕಾಯಿ ಸೇವಿಸಿ, ಆರೋಗ್ಯ ವರ್ಧಿಸಿಕೊಳ್ಳಿ

ನೆಲ್ಲಿಕಾಯಿ ಸೇವಿಸಿ, ಆರೋಗ್ಯ ವರ್ಧಿಸಿಕೊಳ್ಳಿ

ಬೆಂಗಳೂರು, ಏ. 10, ನ್ಯೂಸ್ ಎಕ್ಸ್ ಪ್ರೆಸ್: ಸಾಮಾನ್ಯವಾಗಿ ಅನೇಕ ಹಣ್ಣುಗಳಲ್ಲಿ ವಿಟಮಿನ್ ಸಿ ಕಂಡುಬರುತ್ತದೆ. ಆದರೆ ನೆಲ್ಲಿಕಾಯಿಯಲ್ಲಿ ಕಿತ್ತಳೆ ಹಣ್ಣಿಗಿಂತ ಶೇ.20 ರಷ್ಟು ಹೆಚ್ಚಿನ ವಿಟಮಿನ್ ಪೋಷಕಾಂಶ ಇರುತ್ತದೆ.

ನಮ್ಮನ್ನು ಬಾಧಿಸುವ ಅನೇಕ ಕಾಯಿಲೆಗಳಿಗೆ ನೆಲ್ಲಿಕಾಯಿ ರಾಮಬಾಣ. ಹಿಂದಿನ ಕಾಲದಲ್ಲಿ ಇದರ ಮಹತ್ವ ಅರಿತ ಹಿರಿಯರು ಅನೇಕ ಔಷಧಿಗಳಾಗಿ ನೆಲ್ಲಿಕಾಯಿಗಳನ್ನು ಬಳಸುತ್ತಿದ್ದರು. ಇದರಲ್ಲಿರುವ ವಿಟಮಿನ್ ಸಿ ಅಂಶ ಔಷಧೀಯ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಹವಾಮಾನ ಬದಲಾವಣೆಯಿಂದ ಕಂಡು ಬರುವ ಹಾರ್ಮೋನ್ನಲ್ಲಿನ ವ್ಯತ್ಯಾಸವನ್ನು ಸರಿದೂಗಿಸಲು ಹಾಗೂ ಶೀತ ಅಥವಾ ಕೆಮ್ಮನ್ನು ದೂರ ಮಾಡಲು ನೆಲ್ಲಿಕಾಯಿ ಸೇವನೆ ಉತ್ತಮ ಎನ್ನಲಾಗುತ್ತದೆ.

ಇದಾಗ್ಯೂ, ಮಲಬದ್ಧತೆ ಮತ್ತು ಮಧುಮೇಹ ಮುಂತಾದ ಕಾಯಿಲೆಗಳಿಗೆ ಪರಿಹಾರವಾಗಿ ನೆಲ್ಲಿಕಾಯಿಗಳನ್ನು ಬಳಸಬಹುದು. ನೆಲ್ಲಿಕಾಯಿಯನ್ನು ತಿನ್ನುವುದರಿಂದ ನಿಮ್ಮ ದೇಹದ ಕೆಟ್ಟ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಅಷ್ಟೇ ಅಲ್ಲದೆ ಚರ್ಮದ ಸಮಸ್ಯೆ, ಕೂದಲಿಗೂ ನೆಲ್ಲಿಕಾಯಿ ಸೇವನೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ತ್ವಚೆ ಸಂಬಂಧಿ ಕಾಯಿಲೆಗಳು ದೂರವಾಗುತ್ತದೆ.

ನೆಲ್ಲಿಕಾಯಿ ಕಹಿಯಾಗಿರುವುದರಿಂದ ತಿನ್ನುವುದು ತುಸು ಕಷ್ಟಕರ ಎನಿಸಬಹುದು. ಹೀಗಾಗಿ ಆಹಾರ ರೂಪದಲ್ಲಿ ಕುದಿಸಿ ಅಥವಾ ಉಪ್ಪಿನಕಾಯಿ ಹಾಕುವ ಮೂಲಕ ಸೇವಿಸಬಹುದು. ಇದರಿಂದ ಕೂಡ ನೆಲ್ಲಿಕಾಯಿಯಿಂದ ದೇಹಕ್ಕೆ ಬೇಕಾದ ಉತ್ತಮ ಪೋಷಕಾಂಶಗಳನ್ನು ಪಡೆಯಬಹುದು. ಅಲ್ಲದೆ ಜೇನಿನೊಂದಿಗೆ ಸೇರಿಸಿ ತಿನ್ನಬಹುದು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನುವುದು ಆರೋಗ್ಯಕ್ಕೆ ಉತ್ತಮ.

ನೆಲ್ಲಿಕಾಯಿ ರಸವನ್ನು ಕುಡಿಯುವುದರಿಂದ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನೆಲ್ಲಿಕಾಯಿ ರಸ ಸೇವಿಸುವುದರಿಂದ ನಿಯಂತ್ರಿಸಬಹುದು. ಇದರಿಂದ ದೇಹ ತೂಕ ನಿಯಂತ್ರಣಕ್ಕೆ ಬರಲಿದೆ. ಅಷ್ಟೇ ಅಲ್ಲದೆ ಈ ಜ್ಯೂಸ್ ದಿನನಿತ್ಯ ಕುಡಿದರೆ ಮಧುಮೇಹದ ಸಮಸ್ಯೆಯನ್ನು ತೊಡೆದುಹಾಕಬಹುದು.

 

ಫ್ರೆಶ್ ನ್ಯೂಸ್

Latest Posts

Featured Videos