ಮಲಗುವ ಮುನ್ನ ಏಲಕ್ಕಿ ಸೇವಿಸಿ

ಮಲಗುವ ಮುನ್ನ ಏಲಕ್ಕಿ ಸೇವಿಸಿ

ಬೆಂಗಳೂರು, . 9, ನ್ಯೂಸ್ ಎಕ್ಸ್ ಪ್ರೆಸ್: ಪ್ರತಿಯೊಬ್ಬರು ಹೊಟ್ಟೆಯನ್ನು ಕರಗಿಸಿ ಸುಂದರವಾಗಿ ಕಾಣಿಸಿಕೊಳ್ಳಲು ಇಚ್ಛಿಸುತ್ತಾರೆ. ಆದರೆ ದೈನಂದಿನ ಜೀವನ ಶೈಲಿ ಮತ್ತದೇ ಸಮಸ್ಯೆಯನ್ನು ತಂದೊಡುತ್ತದೆ. ಮುಖ್ಯವಾಗಿ ಕಚೇರಿಗಳಲ್ಲಿ ಕೂತು ಕೆಲಸ ಮಾಡುವವರು ಡೊಳ್ಳು ಹೊಟ್ಟೆಯ ಸಮಸ್ಯೆಗೆ ಈಡಾಗಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ದೀರ್ಘವಾಧಿವರೆಗೆ ಕುಳಿತುಕೊಳ್ಳುವುದು ಮತ್ತು ನಾವು ಸೇವಿಸುವ ಆಹಾರ ಪದಾರ್ಥಗಳಾಗಿವೆ. ದೇಹದಲ್ಲಿ ಕೊಬ್ಬು ಹೆಚ್ಚಾದಂತೆ ಸಮಸ್ಯೆಗಳೂ ಕಾಡಲಾರಂಭಿಸುತ್ತದೆ.

ವಾಸ್ತವವಾಗಿ ಹೊಟ್ಟೆಯು ಚೆನ್ನಾಗಿದ್ದರೆ ಮಾತ್ರ ಮನುಷ್ಯನು ಆರೋಗ್ಯವಾಗಿರುತ್ತಾನೆ. ಹೀಗಾಗಿ ಹೊಟ್ಟೆಯನ್ನು ಕರಗಿಸಿಕೊಳ್ಳಲು ನಾನಾ ಸರ್ಕಸ್ ಮಾಡುವವರೇ ಹೆಚ್ಚು. ಆದರೆ ಪುರುಷರಿಗೆ ಹೊಟ್ಟೆಯನ್ನು ಕಡಿಮೆ ಮಾಡಿಕೊಳ್ಳಲು ಸುಲಭ ಉಪಾಯವೊಂದಿದೆ. ಪ್ರತಿ ನಿತ್ಯ ರಾತ್ರಿ ಮಲಗುವ ಮುನ್ನ ಬಿಸಿ ನೀರಿನೊಂದಿಗೆ 2 ಏಲಕ್ಕಿಯನ್ನು ತಿನ್ನುವುದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಇದರಿಂದ ನಿಮ್ಮ ದೇಹದ ತೂಕ ಕೂಡ ನಿಯಂತ್ರಣದಲ್ಲಿರುತ್ತದೆ.

ಸಣ್ಣ ಏಲಕ್ಕಿಯಲ್ಲಿ ಪೊಟಾಷಿಯಂ, ಮೆಗ್ನೀಷಿಯಂ, ವಿಟಮಿನ್ ಬಿ 1, ಬಿ 6 ಮತ್ತು ವಿಟಮಿನ್ ಸಿ ಅಂಶಗಳು ಹೇರಳವಾಗಿವೆ. ಇದು ದೇಹದ ಕೊಬ್ಬನ್ನು ಕರಗಿಸುತ್ತದೆ. ಹಾಗೆಯೇ ಇದರಲ್ಲಿರುವ ಫೈಬರ್ ಮತ್ತು ಕ್ಯಾಲ್ಸಿಯಂ ತೂಕವನ್ನು ನಿಯಂತ್ರಿಸುತ್ತದೆ.

ಏಲಕ್ಕಿಯಲ್ಲಿರುವ ಪೊಟಾಷಿಯಂ ಮತ್ತು ಫೈಬರ್ ಅಂಶಗಳು ದೇಹದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿರಲಿದೆ. ಏಲಕ್ಕಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಯೂರಿನ್ ಇಂಫೆಕ್ಷನ್ ಅನ್ನು ದೂರ ಮಾಡಬಹುದು. ಹೊಟ್ಟೆಯ ಸಮಸ್ಯೆಗಳಿಗೂ ಪರಿಹಾರವಾಗಿ ಏಲಕ್ಕಿಯನ್ನು ರಾತ್ರಿ ಹೊತ್ತಲ್ಲಿ ಬಿಸಿ ನೀರಿನೊಂದಿಗೆ ಸೇವಿಸುವುದು ಉತ್ತಮ. ಈ ರೀತಿಯಾಗಿ ನೈಸರ್ಗಿಕವಾಗಿ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳಬಹುದು.

ಫ್ರೆಶ್ ನ್ಯೂಸ್

Latest Posts

Featured Videos