ಬೇಸಿಗೆಯಲ್ಲಿ ತ್ಚಚೆಯ ಆರೈಕೆ

ಬೇಸಿಗೆಯಲ್ಲಿ ತ್ಚಚೆಯ ಆರೈಕೆ

ಬೆಂಗಳೂರು, . 5, ನ್ಯೂಸ್ ಎಕ್ಸ್ ಪ್ರೆಸ್: ಬೇಸಿಗೆಯ ತಾಪ ತುಂಬಾ ತೀವ್ರವಾದುದು. ಸೂರ್ಯನ ಕಿರಣಗಳಿಂದ ಚರ್ಮಕ್ಕಾಗುವ ಹಾನಿಯನ್ನು ತಪ್ಪಿಸುವುದು ಅತ್ಯಗತ್ಯ.

ಬೇಸಿಗೆಯ ತಿಂಗಳುಗಳಲ್ಲಿ ಸೂರ್ಯನ ಅಪಾಯಕಾರಿ ಕಿರಣಗಳಿಂದ ರಕ್ಷ ಣೆ ಪಡೆಯಬೇಕಾದುದು ಬಹು ಮುಖ್ಯದ ಸಂಗತಿ. ಆದುದರಿಂದ ಪ್ರತಿನಿತ್ಯ ಎರಡರಿಂದ ಮೂರು ಬಾರಿ ಸನ್ ಸ್ಕ್ರೀನ್ ಹಚ್ಚಿ. ಇದರಿಂದ ಚರ್ಮದ ಮೇಲೆ ಆಗುವ ಹಾನಿಯನ್ನು ತಪ್ಪಿಸಬಹುದು.

ವಿಪರೀತ ಸೆಖೆಗೆ ಮೈತುಂಬ ಬಟ್ಟೆ ಧರಿಸಲು ಅದು ಹೇಗೆ ತಾನೇ ಸಾಧ್ಯ. ಬೆವರಿಳಿಸುವ ಬೇಸಿಗೆಗೆ ಬಹುತೇಕರು ಮೈ ತುಂಬಾ ಬಟ್ಟೆ ಧರಿಸಲು ಇಷ್ಟ ಪಡುವುದಿಲ್ಲ. ಆದರೆ ಇದು ಚರ್ಮದ ಆರೋಗ್ಯಕ್ಕೆ ಮಾರಕ. ಯಾಕೆಂದರೆ ಎಷ್ಟು ಸಾಧ್ಯವೋ ಅಷ್ಟು ಚರ್ಮವು ಮುಚ್ಚಿಕೊಳ್ಳುವಂತಹ ಬಟ್ಟೆ ಧರಿಸಿದರೆ ಒಳ್ಳೆಯದು. ಇದರ ಜೊತೆಗೆ ಸೂರ್ಯನ ಕಿರಣಗಳಿಂದ ನಿಮ್ಮ ಮುಖವನ್ನು ರಕ್ಷಿಸಲು ಹ್ಯಾಟ್ ಮತ್ತು ಸನ್ ಗ್ಲಾಸ್ ಧರಿಸಬಹುದು.

ಎಲ್ಲದಕ್ಕಿಂತಲೂ ಮುಖ್ಯವಾದ ವಿಚಾರ ವೆಂದರೆ ದ್ರವ ಪದಾರ್ಥ. ಬೇಸಿಗೆ ಕಾಲದಲ್ಲಿ ಅದೆಷ್ಟು ದ್ರವ ಪದಾರ್ಥ ಸೇವಿಸಿದರೂ ಅದು ಕಡಿಮೆಯೇ! ಆದುದರಿಂದ ಪ್ರತಿನಿತ್ಯ ದೇಹಕ್ಕೆ ಅಗತ್ಯವಿರುವ ದ್ರವ ಪದಾರ್ಥಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಡಿ.

ಇದು ನಿಮ್ಮ ಚರ್ಮವನ್ನು ಆದ್ರ್ರವಾಗಿರಿಸಲು ಸಹಕಾರಿ. ಇದೆಲ್ಲದರ ಜೊತೆಗೆ ಮಾಯಶ್ಚರೈಸರ್ ಅನ್ನು ತ್ವಚೆಗೆ ಹಚ್ಚುವುದನ್ನು ಮರೆಯಬೇಡಿ.

 

ಫ್ರೆಶ್ ನ್ಯೂಸ್

Latest Posts

Featured Videos