ಅರಿಶಿನದಲ್ಲಿ ಆರೋಗ್ಯ

ಅರಿಶಿನದಲ್ಲಿ ಆರೋಗ್ಯ

ಬೆಂಗಳೂರು, ನ. 12: ಪ್ರತಿ ದಿನ ಅರಿಶಿನ ಬೆರೆಸಿದ ಒಂದು ಲೋಟ ಹಾಲು ಕುಡಿದ್ರೆ ನೀವು ಆರೋಗ್ಯವಾಗಿರಬಹುದು. ಹಾಲು ಮತ್ತು ಅರಿಶಿನ ಎರಡೂ ನೈಸರ್ಗಿಕ ಆಯಂಟಿಬಯೋಟಿಕ್ ಇದ್ದಂತೆ. ಹಲವು ಅಂಟುರೋಗಗಳು ಬರದಂತೆ ಇದು ತಡೆಯುತ್ತದೆ. ಅರಿಶಿನ ಬೆರೆಸಿದ ಹಾಲನ್ನು ಸಾಂಪ್ರದಾಯಿಕ ಮನೆ ಮದ್ದಾಗಿ ಬಳಸಲಾಗುತ್ತದೆ.

ಶೀತಕ್ಕೆ: ಅರಿಶಿನದಲ್ಲಿರುವ ನಂಜು ನಿರೋಧಕ ಮತ್ತು ಸಂಕೋಚಕ ಗುಣಗಳು ಹಾಲಿನ ಹಿತವಾದ ಪರಿಣಾಮದೊಂದಿಗೆ ಬೆರೆತು ಶೀತ ಮತ್ತು ಕೆಮ್ಮನ್ನು ಗುಣಪಡಿಸುತ್ತವೆ. ಆಯಂಟಿವೈರಲ್ ಮತ್ತು ಆಯಂಟಿಬ್ಯಾಕ್ಟೀರಿಯಲ್ ಅಂಶಗಳಿರೋದ್ರಿಂದ ಇದು ಶೀತ ಮತ್ತು ಕೆಮ್ಮಿಗೆ ಅತ್ಯಂತ ಪರಿಣಾಮಕಾರಿ ಔಷಧ.

ಸಂಧಿವಾತ: ಅರಿಶಿನ ಬೆರೆಸಿದ ಹಾಲು ಸಂಧಿವಾತವನ್ನು ಗುಣಪಡಿಸುತ್ತದೆ. ಸ್ನಾಯುಗಳಲ್ಲಿ ಊತವಿದ್ದರೆ ಅದನ್ನು ಕಡಿಮೆ ಮಾಡುತ್ತದೆ. ಸ್ನಾಯು ಮತ್ತು ಕೀಲುಗಳ ನೋವನ್ನು ಕಡಿಮೆ ಮಾಡುವುದರಿಂದ ಅವು ಇನ್ನಷ್ಟು ಫ್ಲೆಕ್ಸಿಬಲ್ ಆಗುತ್ತವೆ.

ಮೂಳೆ ನೋವು: ಆಯಂಟಿಒಕ್ಸಿಡೆಂಟ್ ಗುಣವಿರುವುದರಿಂದ ಅರಿಶಿನ ಬೆರೆಸಿದ ಹಾಲು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಬೆನ್ನು ಮೂಳೆ ಹಾಗೂ ದೇಹದ ಕೀಲುಗಳಿಗೆ ಬಲ ತುಂಬುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ: ಅರಿಶಿನ ಬೆರೆಸಿದ ಹಾಲು ಕುಡಿದ್ರೆ ನಿಮ್ಮ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಅಲ್ಸರ್, ಅತಿಸಾರ ಮತ್ತು ಅಜೀರ್ಣದಂತಹ ಸಮಸ್ಯೆಯಿಂದ ದೂರವಿರಬಹುದು. ಅರಿಶಿನ ಪ್ರಬಲ ನಂಜು ನಿರೋಧಕವಾಗಿರುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ, ಹೊಟ್ಟೆ ಹುಣ್ಣಾಗದಂತೆ ನೋಡಿಕೊಳ್ಳುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos