ಆರೋಗ್ಯ ಮತ್ತು ಹೆಚ್ಐವಿ ಹಾಗೂ ಏಡ್ಸ್ ಬಗ್ಗೆ ಅರಿವು

ಆರೋಗ್ಯ ಮತ್ತು ಹೆಚ್ಐವಿ ಹಾಗೂ ಏಡ್ಸ್ ಬಗ್ಗೆ ಅರಿವು

ಕೆ.ಆರ್.ಪುರ, ನ. 13: ಹದಿ ಹರಿಯದ ವಯಸ್ಸಿನ  ಹೈಸ್ಕೂಲ್ ಹಾಗೂ ಪ್ರೌಢಶಾಲೆಯ ಹನ್ನೆರಡು ವಯಸ್ಸು ದಾಟಿದ ಮಕ್ಕಳಲ್ಲಿ ಮಾನಸಿಕವಾಗಿ ಬದಲಾವಣೆ ಬಗ್ಗೆ ಅರಿವು ಮೂಡಿಸಿಲಾಯಿತು ಎಂದು ಬೆಂಗಳೂರು ಪೂರ್ವ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ವಿಂಧ್ಯ ಅವರು ತಿಳಿಸಿದರು.

ಕೆ.ಆರ್.ಪುರ ಸಮೀಪದ ಎಸ್.ಇ.ಎ ಹೈಸ್ಕೂಲ್ ನ ಎನ್ ಸಿಸಿ ಮಕ್ಕಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಹಮ್ಮಿ ಕೊಳ್ಳಲಾಗಿದ್ದ ಆರೋಗ್ಯ ಮತ್ತು ಹೆಚ್ಐವಿ ಹಾಗೂ ಏಡ್ಸ್ ಬಗ್ಗೆ ಅರಿವಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹನ್ನೆರಡು ವಯಸ್ಸು ಮೇಲ್ಪಟ್ಟ ಮಕ್ಕಳಲ್ಲಿ ಉಂಟಾಗುವ ಮಾನಸಿಕ ಬದಲಾವಣೆಯಲ್ಲಿ ಹಲವಾರು ವ್ಯತ್ಯಾಸಗಳು ಆಗಳಿದ್ದು, ಅವರಿಗೆ ಮುಖ್ಯವಾಗಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಯಿತು ಎಂದರು.

ಆರೋಗ್ಯದ ಜತೆಗೆ ಹೆಚ್.ಐ.ವಿ ಹಾಗೂ ಏಡ್ಸ್ ಮತ್ತು ಗುಪ್ತ ಕಾಯಿಲೆ, ಶುಚಿತ್ವದ ಬಗ್ಗೆ ಅರಿವು ಮೂಡಿಸಲಾಯಿತು ಎಂದರು. ಸಾಮಾನ್ಯವಾಗಿ ಈ ವಯಸ್ಸಿನ ಮಕ್ಕಳಲ್ಲಿ ಉಂಟಾಗುವ ಮಾನಸಿಕ ಬದಲಾವಣೆಗಳ ಬಗ್ಗೆ ಎಲ್ಲಾ ಶಾಲೆಗಳ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್.ಇ.ಎ ಹೈಸ್ಕೂಲ್ ಮುಖ್ಯಸ್ಥೆ ಆಶಾ, ಬಸವನಪುರ ವಾರ್ಡ್ ನ ಆರೋಗ್ಯ ನಿರೀಕ್ಷಕ ಗುರುರಾಜ್, ಎನ್ ಸಿಸಿ ಅಧಿಕಾರಿ ಆಲ್ಪೈನ್ಸ್ ಸೇರಿದಂತೆ ಇತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos