ಸೀತಾಫಲಾ ಹಣ‍್ಣಿನಲ್ಲಿ ಆರೋಗ್ಯ

ಸೀತಾಫಲಾ ಹಣ‍್ಣಿನಲ್ಲಿ ಆರೋಗ್ಯ

ಬೆಂಗಳೂರು, ನ.  07: ಸೀತಾಫಲ ಹಣ್ಣು ರುಚಿಯೊಂದಿಗೆ ನಿಮ್ಮ ಆರೋಗ್ಯವನ್ನೂ ಕಾಪಾಡುವಲ್ಲಿ ಈ ಪ್ರಮುಖ ಪಾತ್ರವಹಿಸುತ್ತದೆ ಎಂಬುದು ಗೊತ್ತಿರಲಿ. ಸೀತಾಫಲ ಸೇವನೆಯಿಂದ ಹೆಚ್ಚಿನ ಕ್ಯಾಲೋರಿ ದೊರಕುತ್ತವೆ. ಅಷ್ಟೇ ಅಲ್ಲದೆ ತ್ವಚೆ, ಕೂದಲು, ರಕ್ತದೊತ್ತಡ

ಹೃದಯಾಘಾತದಿಂದ ರಕ್ಷಿಸುತ್ತದೆ: ಸೀತಾ ಫಲದಲ್ಲಿ ವಿಟಮಿನ್ B6 ಪ್ರಮಾಣ ಹೆಚ್ಚಾಗಿರುವುದರಿಂದ ರಕ್ತದಲ್ಲಿ ಹೀಮೋಸಿಸ್ಟೈನ್ (homocystein)ಸಂಗ್ರಹವನ್ನು ಕಡಿಮೆಗೊಳಿಸುತ್ತದೆ. ಇದರಿಂದಾಗಿ ಮುಂದೆ ಹೃದಯಾಘಾತದ ಅಪಾಯ ಬರುವ ಸಾಧ್ಯತೆ ಇರುವುದಿಲ್ಲ.

ಮಧುಮೇಹ: ಸೀತಾಫಲಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಆವರಿಸುವ ಸಾಧ್ಯತೆಯನ್ನು ದೂರ ಮಾಡಬಹುದು. ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತವೆ.

ಜೀರ್ಣಕ್ರಿಯೆಗೆ: ಸೀತಾಫಲ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು.

ಕೊಲೆಸ್ಟ್ರಾಲ್ ಕಡಿಮೆ: ಈ ಹಣ್ಣಿನಲ್ಲಿರುವ ನಿಯಾಸಿನ್ ಹಾಗೂ ಕರಗುವ ನಾರು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ.

ರಕ್ತಹೀನತೆಗೆ ಪರಿಹಾರ: ಸೀತಾಫಲದಲ್ಲಿ ರಕ್ತಕಣಗಳ ಉತ್ಪಾದನೆಗೆ ಸಹಕರಿಸುವ ಗುಣಗಳಿವೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು, ತಾಮ್ರ, ಕಬ್ಬಿಣ ಅಂಶಗಳಿದ್ದು ರಕ್ತಕಣಗಳ ಉತ್ಪಾದನೆ ಹೆಚ್ಚಿಸುತ್ತವೆ. ನಿಯಮಿತವಾಗಿ ಸೀತಾಫಲ ಸೇವಿಸುತ್ತಿದ್ದರೆ ರಕ್ತಹೀನತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಫ್ರೆಶ್ ನ್ಯೂಸ್

Latest Posts

Featured Videos