ಅವನೇ ಶ್ರೀಮನ್ನಾರಾಯಣ ದಕ್ಷಿಣ ಭಾರತದ ಕಡೆ ಪ್ರಯಾಣ

ಅವನೇ ಶ್ರೀಮನ್ನಾರಾಯಣ ದಕ್ಷಿಣ ಭಾರತದ ಕಡೆ ಪ್ರಯಾಣ

ಬೆಂಗಳೂರು, ಡಿ. 17: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಮೂಡಿಬರುತ್ತಿರುವ ಚಿತ್ರಗಳೆಲ್ಲ ವಿಬಿನ್ನ ರೀತಿಯಲ್ಲಿ ತೆರಿ ಕಾಣುತ್ತಿವೆ. ಹೌದು. ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರವು ಇದೇ ತಿಂಗಳು 27ರಂದು ತೆರೆಗೆ ಬರಲಿದೆ. ಕಿರಿಕ್ ಪಾರ್ಟಿ ಚಿತ್ರ ನಂತರ ಬರೋಬ್ಬರಿ 3 ವರ್ಷಗಳ ನಂತರ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಈ ಚಿತ್ರ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಈಗಾಗಲೇ ಪ್ರಚಾರ ಕಾರ್ಯ ಶುರುಮಾಡಿರುವ ಚಿತ್ರತಂಡ ಇಂದಿನಿಂದ ದಕ್ಷಿಣ ಭಾರತದ ಕಡೆ ಪ್ರಚಾರಕ್ಕಾಗಿ ಪ್ರಯಾಣ ಮಾಡಲಿದೆ.

ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ 2 ರೈಲಿನ ತುಂಬ ಅವನೇ ಶ್ರೀಮನ್ನಾರಾಯಣ ಪೋಸ್ಟರ್ ಅಂಟಿಸಲಾಗಿದ್ದು, ರಾಜ್ಯಾದ್ಯಂತ ಇಂದಿನಿಂದ ನಾರಾಯಣನನ್ನು ಹೊತ್ತ ರೈಲ್ವೆ ಬೋಗಿಗಳು ಸಂಚರಿಸಲಿವೆ. ಈ ಮೂಲಕ ಬಿಡುಗಡೆಗೂ ಮುನ್ನವೇ ಈ ಸಿನಿಮಾ ಹೊಸ ದಾಖಲೆ ಬರೆದಿದೆ.

ಪಂಚ ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ಕನ್ನಡದ ಬಹು ನಿರೀಕ್ಷಿತ ಸಿನಿಮಾ ಅವನೇ ಶ್ರೀಮನ್ನಾರಾಯಣ ಬಿಡುಗಡೆಗೆ 10 ದಿನಗಳಷ್ಟೇ ಬಾಕಿ ಇವೆ. ಪುಷ್ಕರ್ ಫಿಲ್ಮ್ಸ್ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ ಈಗಾಗಲೇ ಯು ಸರ್ಟಿಫಿಕೇಟ್ ಸಿಕ್ಕಿದೆ.

ಆಟೋಗಳ ಹಿಂಭಾಗದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಪೋಸ್ಟರ್ ಅಂಟಿಸಿ ಭರ್ಜರಿ ಪ್ರಚಾರ ನಡೆಸಿದ್ದ ಚಿತ್ರತಂಡ ಈಗ ರೈಲಿನ ಮೇಲೂ ಕಣ್ಣಿಟ್ಟಿದೆ.

ರೈಲು ಬೋಗಿಗಳ ಉದ್ದಕ್ಕೂ ‘ಅವನೇ ಶ್ರೀಮನ್ನಾರಾಯಣ’ನ ಬೃಹತ್ ಪೋಸ್ಟರ್ ಅಂಟಿಸುವ ಮೂಲಕ ವಿನೂತನ ರೀತಿಯ ಪ್ರಚಾರಕ್ಕೆ ನಿರ್ಮಾಪಕರು ಮುಂದಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಗೂ ಮೊದಲೇ ಹೊಸ ದಾಖಲೆ ನಿರ್ಮಿಸಲು ‘ಅವನೇ ಶ್ರೀಮನ್ನಾರಾಯಣ’ ತಂಡ ಮುಂದಾಗಿದೆ. ಈ ಮೂಲಕ ‘ಅವನೇ ಶ್ರೀಮನ್ನಾರಾಯಣ’ನ ಅದ್ದೂರಿ ಪ್ರಮೋಷನ್ ನಡೆಸುತ್ತಿರುವ ಸಿನಿಮಾ ತಂಡಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗಳು ಕೇಳಿಬರುತ್ತಿವೆ.

 

ಫ್ರೆಶ್ ನ್ಯೂಸ್

Latest Posts

Featured Videos