ಸೇವಾ ಮನೋಭಾವದಿಂದ ಮಾನವ ಮಹಾತ್ಮನಾಗಬಲ್ಲ

ಸೇವಾ ಮನೋಭಾವದಿಂದ ಮಾನವ ಮಹಾತ್ಮನಾಗಬಲ್ಲ

ಹುಳಿಯಾರು:ಕುಪ್ಪರು ಸುಕ್ಷೇತ್ರದಲ್ಲಿ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯವರ ಸನ್ನಿಧಿಯಲ್ಲಿ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ೧೯ ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರವ ಏರ್ಪಡಿಸಲಾಗಿತ್ತು.
ಡಾ.ಯತೀಶ್ವರಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವಚನ ನುಡಿಗಳನ್ನಾಡಿ ಅತ್ಯಂತ ಸರಳರೂ, ಭಕ್ತ ರೊಳಗೆ ತಾವು ಭಕ್ತರಾಗಿ ಶ್ರೀಮಠದ ಕೀರ್ತಿಯನ್ನು ಜೊತೆಗೆ ಮರುಳಸಿದ್ದರ ಕ್ಷೇತ್ರವನ್ನು ಜಗನ್ಮಾನ್ಯ ಗೊಳಿಸಿದವರು ದೊಡ್ಡಜ್ಜಯ್ಯರವರು. ಶ್ರಾವಣ ಮಾಸದ ಪೂಜೆ, ಅಮಾವಾಸ್ಯೆ, ಹುಣ್ಣಿಮೆ ಪೂಜೆ, ರುದ್ರಾಭಿಷೇಕ,ಮೃತ್ಯಂಜಯ ಜಪ ಗಳನ್ನು ವಿಶೇಷವಾಗಿ ಆರಂಭಿಸಿ ಭಕ್ತರಲ್ಲಿ ಸಂಚಲನ ಉಂಟು ಮಾಡಿದವರು ಎಂದರಲ್ಲದೆ ಶ್ರೀ ಗುರು ಮರುಳಸಿದ್ದೇಶ್ವರ ರಥೋತ್ಸವ ಮತ್ತು ಜಾತ್ರೆ ಆರಂಭಿಸಿದವರು ಎಂದರು.
ಮಾತೃ ಹೃದಯದ ಮೂಲಕ ಇವತ್ತಿಗೂ ಎಲ್ಲರ ಹೃದಯದಲ್ಲಿ ವಿರಾಜಮಾನರಾಗಿದ್ದಾರೆ. ಶ್ರೀ ಗುರು ಮರುಳಸಿದ್ಧೇಶ್ವರ ಸ್ವಾಮಿಯ ಅನುಗ್ರಹವನ್ನು ಮನೆ-ಮನಕ್ಕೆ ತಲುಪಿಸಿದ ಶ್ರೀಮಂತ ಮನಸ್ಸಿನ ಒಡೆಯರು. ದಾಸೋಹದ ಬಗ್ಗೆ ವಿಶೇಷ ಆಸಕ್ತಿ ಇದ್ದ ಶ್ರೀಗಳು ಅಂತರಂಗ ಬಹಿರಂಗಗಳೆರಡನ್ನೂ ಒಂದಾಗಿಸಿಕೊಂಡು ಬಾಳಿದವರು. ಭಕ್ತಿ, ತ್ಯಾಗ, ಸೇವಾ ಮನೋಭಾವನೆಯಿಂದ ಮಾನವ ಮಹಾತ್ಮನಾಗ ಬಲ್ಲ ಎಂಬ ಮಾತಿಗೆ ನಮ್ಮ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಬಹುದೊಡ್ಡ ಉದಾಹರಣೆ ಎಂಬುದಾಗಿ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos