ಹೆಚ್ ಡಿ ಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಹೆಚ್ ಡಿ ಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಬೆಂಗಳೂರು: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಹೋರಾಟಗಾರರೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಆಸ್ತಿ ಕುರಿತು ಪೂರ್ಣ ಮಾಹಿತಿ ನೀಡಿದ. ಆರೋಪಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲ ಹೋರಾಟಗಾರ ಸಿ.ಎಸ್.ಸಿದ್ದರಾಜು ಎನ್ನುವರು ದೂರು ನೀಡಿದ್ದಾರೆ.

2004 ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೇತನಗಾನಹಳ್ಳಿಯಲ್ಲಿ 24 ಎಕರೆ ಜಮೀನಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ವಿವಿಧ ಸರ್ವೇ ನಂಬರ್ ಗಳಲ್ಲಿ 1,2,3,4 ಎಕರೆ ಜಮೀನು ಖರೀದಿ ಮಾಡಿರುವುದಾಗಿ ಹೇಳಿದ್ದಾರೆ . ಹಾಗೆ ತನ್ನ ಚಿಕ್ಕಮ್ಮ ಸಾವಿತ್ರಮ್ಮರಿಂದ ದಾನ ಪಡೆದಿರುವುದಾಗಿಯೂ ಹೇಳಿದ್ದಾರೆ. ಸಾವಿತ್ರಮ್ಮನವರಿಗೆ ಕುಮಾರಸ್ವಾಮಿ ಬೇನಾಮಿಯಾಗಿದ್ದಾರಾ ? ಅಥವಾ ತಾಯಿಯ ಸಹೋದರಿಯ ಆದಾಯದ ಮೂಲ ಯಾವುದು? ಎಂದು ಪ್ರಶ್ನಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos