ಮಗನ ಸಿನಿಮಾಗಾಗಿ ಹೆಚ್ಡಿಕೆ ವಿದೇಶಕ್ಕೆ

ಮಗನ ಸಿನಿಮಾಗಾಗಿ ಹೆಚ್ಡಿಕೆ ವಿದೇಶಕ್ಕೆ

ಬೆಂಗಳೂರು, ನ. 4 : ರಾಜಕೀಯ ನಿಯಮಗಳನ್ನು ಗಾಳಿಗೆ ತೂರಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ  ಮಗನ ಸಿನಿಮಾಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸುತ್ತಿರುವುದು ಜೆಡಿಎಸ್ ನಾಯಕರುಗಳು ಅಸಮಾಧಾನ ಹೊರಹಾಕಿದ್ದಾರೆ.
ಮಗನ ಸಿನಿಮಾಕ್ಕಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೇರಿ ಮಗನ ಮುಂದಿನ ಸಿನಿಮಾ ಪ್ರಾಜೆಕ್ಟ್ ವಿಚಾರದ ಚರ್ಚೆ ಮಾಡಲು ಮಗ ಹಾಗೂ ಪತ್ನಿ ಸಮೇತ ಹೆಚ್ಡಿಕೆ ಲಂಡನ್ ಪ್ರವಾಸ ಕೈಗೊಂಡಿದ್ದು, ನ.8ರಂದು ವಾಪಸ್ಸಾಗಲಿದ್ದಾರೆ. ವಿಧಾನ ಪರಿಷತ್ ಸದಸ್ಯರ ಅಸಮಾಧಾನಕ್ಕೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಡೋಂಟ್ ಕೇರ್ ಅಂದಿದ್ದು, ಪಕ್ಷದ ಅಸಮಾಧಾನ ಸರಿ ಮಾಡೋದು ಬಿಟ್ಟು ವಿದೇಶಕ್ಕೆ ತೆರಳಿದ್ದಾರೆ.
ಹೆಚ್ಡಿಕೆ ಅವರು ತಮ್ಮ ಪುತ್ರ, ಪತ್ನಿ ಜೊತೆ ಲಂಡನ್ ಪ್ರವಾಸ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮೇಲೆ ಅಸಮಾಧಾನಗೊಂಡಿರುವ ಜೆಡಿಎಸ್ ಪರಿಷತ್ ಸದಸ್ಯರು ಸಭೆ ಮೇಲೆ ಸಭೆ ನಡೆಸಿ ತಮ್ಮ ಸಿಟ್ಟನ್ನು ಹೊರ ಹಾಕುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos