‘ಕಮಲ ದಳ’ ಎಂದು ಪಕ್ಷದ ಹೆಸರು ಬದಲಿಸಿ; ಹೆಚ್ ಡಿ ಕೆ ಕಿಡಿ

‘ಕಮಲ ದಳ’ ಎಂದು ಪಕ್ಷದ ಹೆಸರು ಬದಲಿಸಿ;  ಹೆಚ್ ಡಿ ಕೆ ಕಿಡಿ

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಸುತ್ತಿದ್ದಂತೆ ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆ ನಡೆಯುತ್ತಿದ್ದು ಇದರ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ರಾಜಕೀಯ ಜಿದ್ದಾಜಿದ್ದಿಯಲ್ಲಿ ತೊಡಗಿವೆ.
ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು. ಆದರೆ, ಈಗ ‘ಜಾತ್ಯಾತೀತತೆ’ಯನ್ನು ವಿಸರ್ಜಿಸಲು ಹೊರಟಿದ್ದಾರೆ. ಜನತಾ ದಳ ಎಂಬ ಹೆಸರನ್ನು ‘ಕಮಲ ದಳ’ ಎಂದು ಬದಲಿಸಿಕೊಂಡರೆ ಒಳಿತು ಎಂದು ಕರ್ನಾಟಕ ಕಾಂಗ್ರೆಸ್ ತನ್ನ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದೆ.
ಇದೇ ವೇಳೆ, ಟ್ಯಾಕ್ಸಿ, ಆಟೋರಿಕ್ಷಾ ಚಾಲಕರು ಸೇರಿದಂತೆ ಒಂದು ವರ್ಗದ ಜನರ ಮೇಲೆ ಕಾಂಗ್ರೆಸ್ ಸರ್ಕಾರದ ಖಾತರಿಗಳು ನಕಾರಾತ್ಮಕ ಪರಿಣಾಮ ಬೀರುತ್ತಿವೆ ಪ್ರತಿಷ್ಠೆಯನ್ನು ಬದಿಗಿಟ್ಟು ಖಾಸಗಿ ಸಾರಿಗೆ ಸಂಸ್ಥೆಗಳ ಬೇಡಿಕೆಗಳನ್ನು ಸರ್ಕಾರ ಮಾನವೀಯತೆಯಿಂದ ಪರಿಗಣಿಸಬೇಕು ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.
ವರದಿ
ಮಂಜುನಾಥ.ಲಕ್ಕಿಮರ(ವಿಜಯನಗರ)

ಫ್ರೆಶ್ ನ್ಯೂಸ್

Latest Posts

Featured Videos