ಹ್ಯಾಟ್ರಿಕ್‌ ಹೀರೋ ಆಸ್ಪತ್ರೆಗೆ ದಾಖಲು..!

ಹ್ಯಾಟ್ರಿಕ್‌ ಹೀರೋ ಆಸ್ಪತ್ರೆಗೆ ದಾಖಲು..!

ಬೆಂಗಳೂರು: ನಮ್ಮ ಸ್ಯಾಂಡಲ್ ವುಡ್ ನ ಟಾಪ್ ನಟರಲ್ಲಿ ಶಿವರಾಜ್ ಕುಮಾರ್ ಕೂಡ ಒಬ್ಬರು ಇವರಿಗೆ ಇಡೀ ರಾಜ್ಯದಾದ್ಯಂತ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ ನಟ ಶಿವರಾಜ್ ಕುಮಾರ್ ಅವರಿಗೆ ವಯಸ್ಸಾಗಿದ್ದರು ಸಹ ಅವರು ಈಗಲೂ ಸಹ ಸ್ವೀಟ್ ಸಿಕ್ಸ್ಟೀನ್ ಅಂತೆ ಕೆಲಸ ಮಾಡುತ್ತಾರೆ. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಶಿವಣ್ಣ ಎಂದು ಕರೆಯುತ್ತಾರೆ.

ನಟ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಬೆಂಗಳೂರಿನಲ್ಲಿರುವ ವೈದೇಹಿ ಆಸ್ಪತ್ರೆಯಲ್ಲಿ ಶಿವಣ್ಣಾ ಅವರನ್ನು ಚಿಕಿತ್ಸೆಗೆಂದು ದಾಖಲಿಸಲಾಗಿದೆ. ವೈದ್ಯರು ಈಗಾಗಲೇ ಆರೋಗ್ಯ ತಪಾಸಣೆ ಮಾಡಿದ್ದು ಸಂಜೆ ಹೊತ್ತಿಗೆ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿರುವ ಗೀತಾ ಶಿವರಾಜ್​ಕುಮಾರ್​ ಶಿವಮೊಗ್ಗದಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಪ್ರಚಾರಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿರುವ ಗೀತಾ ಶಿವರಾಜ್​ಕುಮಾರ್, ಈ ಬಾರಿ ಗೆದ್ದೆ ಗೆಲ್ಲಲು ಶಿವರಾಜಕುಮಾರ್ ಅವರನ್ನು ತಮ್ಮೊಂದಿಗೆ ಪ್ರಚಾರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ತೀವ್ರ ಬಿಸಿಲು ಓಡಾಟ ಹೆಚ್ಚಾದ್ದರಿಂದ ಶಿವಣ್ಣ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos