ಹಸು ಸಗಣಿಯಿಂದ ‘ರಾಖಿ’

ಹಸು ಸಗಣಿಯಿಂದ ‘ರಾಖಿ’

ಉತ್ತರ ಪ್ರದೇಶ , ಆ. 1 : ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಹಸು ಆಶ್ರಯದಾಮವೊಂದು ಹಸುವಿನ ಸಗಣಿಯಿಂದ ರಾಖಿಗಳನ್ನು ತಯಾರಿಸುತ್ತದೆಯಂತೆ.
ಇದನ್ನು 52 ವರ್ಷದ ಎನ್ ಆರ್ ಐ ಕಂಡುಹಿಡಿದಿದ್ದು, ಕೆಲಸಕ್ಕಾಗಿ ಇಂಡೋನೇಷ್ಯಾದಲ್ಲಿ ತನ್ನ ಉದ್ಯೋಗವನ್ನು ಬಿಟ್ಟು ಬಂದಿದ್ದಾರಂತೆ. ಕುಂಭಮೇಳ ಕಾರ್ಯಕ್ರಮದಲ್ಲಿ ಸಗಣಿಯಿಂದ ಮಾಡಿದ ರಾಖಿಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಇದು ಜನಸಾಮಾನ್ಯರಿಗೆ ಇಷ್ಟವಾಗಿದೆಯಂತೆ. ಹಾಗೇ ಅಲ್ಲಿನ ಸಂತರು ಹಾಗೂ ಗುರುಗಳ ಕೋರಿಕೆಯ ಮೇರೆಗೆ ಈ ರಾಖಿಗಳನ್ನು ಈಗ ಬಿಜ್ನೋರ್ ಮತ್ತು ಉತ್ತರಪ್ರದೇಶದ ಇತರ ಭಾಗಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು , ಈ ಬಾರಿ ಹಬ್ಬಕ್ಕೆ ಈ ರಾಖಿಗಳನ್ನು ಎಲ್ಲಾ ಕಡೆ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಚೀನಿ ರಾಖಿಗಳಿಗೆ ವಿರುದ್ಧವಾಗಿರುವ ಈ ರಾಖಿಗಳು ಪರಿಸರ ಸ್ನೇಹಿಯಾಗಿದ್ದು, ಅವುಗಳ ಬಳಕೆಯ ನಂತರ ಅದನ್ನು ಎಸೆದರೆ ಅದು ಮಣ್ಣಲ್ಲಿ ಕೊಳೆತು ಗೊಬ್ಬರವಾಗುತ್ತದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಇವರು ಹಸುಗಳ ಸಗಣಿಯಿಂದ ಕೇಕ್ ಕೂಡ ತಯಾರಿಸುತ್ತಿದ್ದು, ಇದನ್ನು ಶವಸಂಸ್ಕಾರಕ್ಕೆ ಬಳಸಲಾಗುತ್ತದೆಯಂತೆ.

ಫ್ರೆಶ್ ನ್ಯೂಸ್

Latest Posts

Featured Videos