ಹಸಿವು ತಾಳದೆ ಮಣ್ಣು ತಿಂದು ಸತ್ತ ಕಂದಮ್ಮಗಳು!

ಹಸಿವು ತಾಳದೆ ಮಣ್ಣು ತಿಂದು ಸತ್ತ ಕಂದಮ್ಮಗಳು!

ಚಿಕ್ಕಬಳ್ಳಾಪುರ, ಮೇ.7, ನ್ಯೂಸ್ ಎಕ್ಸ್ ಪ್ರೆಸ್: ಚಿಕ್ಕಬಳ್ಳಾಪುರ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳು ಕಳೆದರೂ ನಮ್ಮ ಬಡತನ ಹಸಿವು ಸಂಪೂರ್ಣ ನಿಂತಿಲ್ಲ. ಜಿಲ್ಲೆಯಿಂದ ಕೂಲಿ ಕೆಲಸಕ್ಕಾಗಿ ಆಂಧ್ರಕ್ಕೆ ವಲಸೆ ಹೋಗಿದ್ದ ಬಡ ಕುಟುಂಬದ ಇಬ್ಬರು ಮಕ್ಕಳು ಹೊಟ್ಟೆ ಹಸಿವಿನಿಂದ ಮಣ್ಣು ತಿಂದು ಮೃತಪಟ್ಟ ಘಟನೆ ವರದಿಯಾಗಿದೆ. 6 ತಿಂಗಳ ಹಿಂದೆ ಗುಡಿಬಂಡೆಯ ಮಹೇಶ್​-ನೀಲವೇಣಿ ದಂಪತಿ ಪುತ್ರ ಅವಿನಾಶ್ (3) ಮಣ್ಣು ತಿಂದು ಮೃತಪಟ್ಟಿದ್ದ. ಈಗ 3 ದಿನಗಳ ಹಿಂದೆ ಮಹೇಶ್​ನ ಅಕ್ಕನ ಮಗಳು ವೆನ್ನೆಲಾಳ (4) ಸಾವನ್ನಪ್ಪಿದ್ದಾಳೆ. ದಂಪತಿಗೆ ಶ್ರೀನಿವಾಸ್, ಅಂಜಲಿ, ವನಿತಾ, 1 ವರ್ಷದ ಮಗು ಇದೆ. ಈ ದಂಪತಿ 10 ವರ್ಷಗಳ ಹಿಂದೆ ಅನಂತಪುರಕ್ಕೆ ವಲಸೆ ಹೋಗಿ ಕುಮ್ಮರವಾಂಡ್ಲಪಲ್ಲಿಯ ಹಮಾಲಿ ಕಾಲನಿಯಲ್ಲಿ ನೆಲೆಸಿದ್ದರು. ಬಡತನ, ಅಧಿಕ ಸಂತಾನ ಸೇರಿ ಆರ್ಥಿಕ ಸಂಕಷ್ಟದಿಂದ ಬಂಡೆ ಮೇಲೆ ಪ್ಲಾಸ್ಟಿಕ್ ಕವರ್​ನಲ್ಲಿ ನಿರ್ವಿುಸಿದ್ದ ಡೇರೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಕುಡಿತದ ಚಟವಿದ್ದ ದಂಪತಿಗಳು ಮಕ್ಕಳಿಗೆ ಸರಿಯಾಗಿ ಊಟ ನೀಡುತ್ತಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos