ಹಸಿರು ಬಂಗಾರ ‘ವೀಳ್ಯದೆಲೆ’

ಹಸಿರು ಬಂಗಾರ ‘ವೀಳ್ಯದೆಲೆ’

ಸೆ. 5 : ಭಾರತೀಯರು ಹಿಂದಿನಿಂದಲೂ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯ ಇದೆ. ದಕ್ಷಿಣ ಭಾರತೀಯರು ತುಂಬಾ ಪೂಜ್ಯನೀಯ ಕಾಣುತ್ತಾರೆ. ಪ್ರತಿಯೊಂದು ಪೂಜೆ, ದೇವರ ಕಾರ್ಯಕ್ರಮಗಳಿಗೆ ವೀಳ್ಯದೆಲೆ ಹಾಗೂ ಅಡಕೆ ಬಳಕೆ ಮಾಡುತ್ತಾರೆ. ನಮ್ಮ ಹಿರಿಯರು ಪ್ರತಿನಿತ್ಯವು ಊಟವಾದ ಬಳಿಕ ಎಲೆ ಅಡಕೆ ಜಗಿಯುತ್ತಿದ್ದರು. ಇದರಿಂದ ಜೀರ್ಣಕ್ರಿಯೆಯು ಸರಾಗ ಆಗುವುದು ಎನ್ನುವ ನಂಬಿಕೆ. ವೀಳ್ಯದೆಲೆ ಜಗಿಯುವುದು ತುಂಬಾ ಅಸಹ್ಯವೆಂದು ಪರಿಗಣಿಸಲಾಗಿದೆ. ಆದರೆ ತಂಬಾಕು ರಹಿತ ವೀಳ್ಯದೆಲೆಯು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಕ್ಯಾನ್ಸರ್, ಮಧುಮೇಹ ಮತ್ತು ಹಲ್ಲಿನ ಸೋಂಕನ್ನು ನಿವಾರಣೆ ಮಾಡುವುದು ಎಂದು ಪರಿಗಣಿಸಲಾಗಿದೆ. ಕ್ಯಾನ್ಸರ್ ಕೂಡ ತಡೆಯುವ ಶಕ್ತಿ ಹೊಂದಿದೆ ಎಂದರೆ ಖಂಡಿತವಾಗಿಯೂ ನಿಮಗೆ ಅಚ್ಚರಿಯಾಗಬಹುದು.
ವೀಳ್ಯದೆಲೆ ಹಾಗಂದರೇನು?
ವೀಳ್ಯದೆಲೆ ಎಂದರೆ ಅದರ ಬಗ್ಗೆ ಗ್ರಾಮಾಂತರ ಪ್ರದೇಶದ ಜನರಿಗೆ ಹೆಚ್ಚಿಗೆ ವಿವರಿಸಬೇಕೆಂದಿಲ್ಲ. ಅದೇ ನಗರ ವಾಸಿಗಳು ಕೂಡ ಪಾನ್ ಶಾಪ್ ಗಳಲ್ಲಿ ಇದನ್ನು ನೋಡಿರಬಹುದು. ಪಾನ್ ಶಾಪ್ ಗಳಲ್ಲಿ ಸಿಗುವಂತಹ ವೀಳ್ಯದೆಲೆಯು ಒಂದು ರೀತಿಯ ಹೈಬ್ರೀಡ್ ಎಲೆ ಎನ್ನಬಹುದು. ದೇಶೀಯ ವೀಳ್ಯದೆಲೆಯಲ್ಲಿ ಹೆಚ್ಚಿನ ಔಷಧೀಯ ಗುಣಗಳು ಇವೆ ಎಂದು ಹೇಳಲಾಗುತ್ತದೆ. ಭಾರತೀಯರು ಆಯುರ್ವೇದದಲ್ಲಿ ವಿವಿಧ ರೀತಿಯ ಚಿಕಿತ್ಸೆಗೆ ಇದನ್ನು ಬಳಸಿಕೊಂಡು ಬಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos