ಹಾಸನದ ಹಾಸನಾಂಬೆ ದೇವಿಯ ದರ್ಶನ

ಹಾಸನದ ಹಾಸನಾಂಬೆ ದೇವಿಯ ದರ್ಶನ

ಹಾಸನ, ಅ.16 : ವರ್ಷಕ್ಕೆ ಒಮ್ಮೆ ದೀಪಾವಳಿ ಸಂದರ್ಭ ಅಶ್ವಯುಜ ಮಾಸದ ಹುಣ್ಣಿಮೆ ನಂತರ ದರ್ಶನ ನೀಡುವ ಹಾಸನಾಂಬ ದೇಗುಲದ ಬಾಗಿಲು ಅ.17ರಂದು ತೆರೆಯಲಿದ್ದು, ಅ.29ರವರೆಗೆ 13 ದಿನಗಳ ಕಾಲ ದೇವಿ ದರ್ಶನ ನೀಡಲಿದ್ದಾಳೆ. ಆಶ್ವೀಜ ಮಾಸದ ಮೊದಲ ಗುರುವಾರ ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಶಕ್ತಿ ದೇವತೆ, ಗ್ರಾಮದೇವತೆ ಐತಿಹಾಸಿಕ ಹಾಸನಾಂಬ ದರ್ಶನಕ್ಕೆ ಕ್ಷಣಗಣನೆ ಶುರು. 13 ದಿನಗಳ ಕಾಲ ಹಾಸನಾಂಬ ದರ್ಶನ ಇರಲಿದೆ. ಮೊದಲ ಮತ್ತು ಕೊನೆಯ ದಿನ ಭಕ್ತಿರಿಗೆ ದೇವಿಯ ದರ್ಶನ ಇರುವುದಿಲ್ಲ. ನಾಳೆ ಮಧ್ಯಾಹ್ನ 12.30ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ಆಶೀರ್ವಾದ ಪಡೆಯಲು ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೇ, ಅನೇಕ ರಾಜ್ಯಗಳಿಂದ ಭಕ್ತರು ಹಾಸನಾಂಬ ದೇವಿಯ ದರ್ಶನ ಪಡೆಯಲು ಬರುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos