ವಿಜಯ್ ಹಜಾರೆ ಟೂರ್ನಿ 2023 ರ ಫೈನಲ್​ಗೆ ಪ್ರವೇಶಿಸಿದ ಹರ್ಯಾಣ!

ವಿಜಯ್ ಹಜಾರೆ ಟೂರ್ನಿ 2023 ರ ಫೈನಲ್​ಗೆ ಪ್ರವೇಶಿಸಿದ ಹರ್ಯಾಣ!

ಬೆಂಗಳೂರು: ವಿಜಯ್ ಹಜಾರೆ ಟೂರ್ನಿಯ ಮೊದಲ ಸೆಮಿಫೈನಲ್​ನಲ್ಲಿ ಹರ್ಯಾಣ ತಂಡ ಭರ್ಜರಿ ಜಯ ಸಾಧಿಸಿದೆ. ತಮಿಳುನಾಡು ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಹರ್ಯಾಣ ತಂಡದ ನಾಯಕ ಅಶೋಕ್ ಮೆನಾರಿಯಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಹರ್ಯಾಣ ತಂಡಕ್ಕೆ ಆರಂಭಿಕ ಆಟಗಾರ ಯುವರಾಜ್ ಸಿಂಗ್ ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಿಮಾಂಶು ರಾಣಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ತಮಿಳುನಾಡು ಬೌಲರ್​ಗಳನ್ನು ದಿಟ್ಟವಾಗಿ ಎದುರಿಸಿದ ರಾಣಾ 118 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ ಅಜೇಯ 116 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ 30 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಫೋರ್​ಗಳೊಂದಿಗೆ ಸುಮಿತ್ ಕುಮಾರ್ 48 ರನ್​ ಬಾರಿಸಿದರು. ಇದರೊಂದಿಗೆ ಹರ್ಯಾಣ ತಂಡವು 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 293 ರನ್ ಕಲೆಹಾಕಿತು. 294 ರನ್​ಗಳ ಗುರಿ ಬೆನ್ನತ್ತಿದ ತಮಿಳುನಾಡು ಉತ್ತಮ ಆರಂಭ ಪಡೆಯಲಿಲ್ಲ.

ಇದರೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಹರ್ಯಾಣ ಬೌಲರ್​ಗಳು ಅಂತಿಮವಾಗಿ ತಮಿಳುನಾಡು ತಂಡವನ್ನು 47.1 ಓವರ್​ಗಳಲ್ಲಿ 230 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಹರ್ಯಾಣ ತಂಡವು 63 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಈ ಹರ್ಯಾಣ ತಂಡ ವಿಜಯ್ ಹಜಾರೆ ಟೂರ್ನಿ 2023 ರ ಫೈನಲ್​ಗೆ ಪ್ರವೇಶಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos